ಲಾಕ್‌ಡೌನ್ ಹಿನ್ನೆಲೆ| ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ KSRTC : ಆರೋಪ

Prasthutha|

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ ಲಾಕ್‌ಡೌನ್ ಬಳಿಕ KSRTC ಬಸ್ ಸಂಚಾರ ಆರಂಭಗೊಂಡಿದ್ದು, KSRTC ಪ್ರಯಾಣಿಕರಿಂದ ದುಪ್ಪಟ್ಟು ದರ ಪಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

- Advertisement -

KSRTC ಮತ್ತು ಖಾಸಗಿ ಬಸ್ ನಡುವೆ ಪೈಪೋಟಿ ನಡೆಯುತ್ತಿದ್ದು, ಈ ಹಿಂದೆ ಬೀರಿಯಿಂದ ತಲಪಾಡಿಗೆ ಖಾಸಗಿ ಬಸ್ ಟಿಕೆಟ್ ದರ 14 ರೂಪಾಯಿ ಪಡೆಯುತ್ತಿತ್ತು. ಇದಕ್ಕೆ ಪೈಪೋಟಿ ನೀಡುತ್ತಿದ್ದ KSRTC ಬಸ್ 10 ರೂಪಾಯಿ ಟಿಕೆಟ್ ಪಡೆಯುತ್ತಿತ್ತು. ಇತ್ತೀಚೆಗೆ ಕೋವಿಡ್ ಲಾಕ್‌ಡೌನ್ ನಿಂದ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಆದ್ರೆ ಇದೀಗ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭಗೊಂಡಿದ್ದು, ಖಾಸಗಿ ಬಸ್ ಇಲ್ಲದ ಹಿನ್ನೆಲೆಯಲ್ಲಿ KSRTC ಬಸ್ ಪ್ರಯಾಣಿಕರಿಂದ ದುಪ್ಪಟ್ಟು ದರ ಪಡೆಯುತ್ತಿದೆ ಎಂದು ಪ್ರಯಾಣಿಕರೊಬ್ಬರು ಇಂದು ಆರೋಪಿಸಿದ್ದಾರೆ.



Join Whatsapp