ಕರ್ನಾಟಕ ಸಾರಿಗೆ ಸಂಸ್ಥೆಗಳು ಮುಳುಗುತ್ತಿರುವ ಹಡಗು, ಸರ್ಕಾರಕ್ಕೆ ಹೊರೆಯಾಗಿದೆ : ಆರ್. ಅಶೋಕ್ ವಿವಾದಾತ್ಮಕ ಹೇಳಿಕೆ !

Prasthutha: April 9, 2021

ಮಂಗಳೂರು : ಸಾರಿಗೆ ನೌಕರರಿಗೆ ಕಳೆದ ಬಾರಿಯ ಪ್ರತಿಭಟನೆಯ ವೇಳೆ ಮಾತು ಕೊಟ್ಟು ಈಡೇರಿಸದೆ ವಚನ ಭ್ರಷ್ಟರಾಗಿರುವ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೀಗ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆಯ ಬಿಸಿ ಅನುಭವಿಸುತ್ತಿದೆ. ಸರ್ಕಾರದ ಸಚಿವರುಗಳು ಸಿಕ್ಕ ಸಿಕ್ಕಲ್ಲಿ ತರಹೇವಾರಿ ಗೊಂದಲಮಯ ಹೇಳಿಕೆಗಳನ್ನು ಕೊಡುತ್ತಿರುವ ಮಧ್ಯೆಯೇ ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಅವರು ಮಂಗಳೂರಿನಲ್ಲಿ ಮತ್ತೊಂದು ಹೇಳಿಕೆ ನೀಡಿದ್ದಾರೆ.  KSRTC, BMTC, NWKRTC ಸಂಸ್ಥೆಗಳು ಮುಳುತ್ತಿರುವ ಹಡಗುಗಳಾಗಿದೆ. ಈ ಮೂರೂ ಸಂಸ್ಥೆಗಳು ನಷ್ಟದಲ್ಲಿದೆ. ಈ ಇಲಾಖೆಗಳು ಮುಳುಗುವ ಹಂತದಲ್ಲಿದೆ ಮತ್ತು ಇವುಗಳು ಸರ್ಕಾರಕ್ಕೆ ಹೊರೆಯಾಗಿದೆ ಎಂದು ಅಶೋಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  ಬಿಜೆಪಿಯ ಸರ್ಕಾರಗಳು ಎಲ್ಲವನ್ನೂ ಖಾಸಗಿಯವರಿಗೆ ವಹಿಸಿ ಕೊಡುತ್ತಿರುವ ಮಧ್ಯೆಯೇ ಸಚಿವರ ಈ ಹೇಳಿಕೆ ಮತ್ತಷ್ಟು ಮಹತ್ವ ಪಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, “ಸರ್ಕಾರ ಸಾಲ ಮಾಡಿ ಸಂಬಳ‌ ಕೊಡುವ ಪರಿಸ್ಥಿತಿ ಇದೆ ಈಗ. ಹೀಗಿರುವಾಗ ನೌಕರರ ಬೇಡಿಕೆ ಸರಿಯಲ್ಲ. ನಷ್ಟದಲ್ಲಿದ್ದರೂ ನೌಕರರಿಗೆ ಸರಿಯಾಗಿ ಸಂಬಳ ಕೊಟ್ಟಿದ್ದೇವೆ. ಕೆಲಸ ಮಾಡದಿದ್ದರೂ ಸಂಬಳದಲ್ಲಿ ಯಾವುದೇ ವ್ಯತ್ಯಯ ಮಾಡಿಲ್ಲ. ಇದನ್ನು ನೌಕರರು ಅರಿತು ಕರ್ತವ್ಯಕ್ಕೆ ಹಾಜರಾಗಬೇಕು. ನೌಕರರ ಈಗಿನ ಬೇಡಿಕೆ ಈಡೇರಿಸೋಕೆ ಸಾಧ್ಯವೇ ಇಲ್ಲ. ಯಾರದ್ದೋ ಮಾತು ಕೇಳಿ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ರೈತ ಹೋರಾಟಗಾರರು. ಇವರಿಂದ ರೈತ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತರಲಾಗುತ್ತಿಲ್ಲ. ನೌಕರರ ಬಗ್ಗೆ ಕಠಿಣ ಕ್ರಮದ ಬಗ್ಗೆ ಸಿಎಂ ಮಾತನಾಡಿದ್ದಾರೆ. ಕೂಡಲೇ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಬೇಕು. ಈಗಾಗಲೇ ರಾಜ್ಯದಲ್ಲಿ ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ನೌಕರರು ಮತ್ತೆ ಕರ್ತವ್ಯಕ್ಕೆ ಹಾಜರಾಗುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!