Home ಟಾಪ್ ಸುದ್ದಿಗಳು ಆಂಧ್ರಪ್ರದೇಶದಲ್ಲಿ KSRTC ಬಸ್ ಚಾಲಕ, ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ

ಆಂಧ್ರಪ್ರದೇಶದಲ್ಲಿ KSRTC ಬಸ್ ಚಾಲಕ, ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ

ಶ್ರೀಶೈಲ: ಆಂಧ್ರಪ್ರದೇಶದಲ್ಲಿ KSRTC ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ಚಾಲಕನನ್ನು ಬಸವರಾಜ್ ಬಿರಾದಾರ್ ಮತ್ತು ನಿರ್ವಾಹಕನನ್ನು ಜೆಡಿ ಮಾದರ್ ಎಂದು ಗುರುತಿಸಲಾಗಿದ್ದು, ಸ್ಥಳೀಯರ ಸಹಾಯದಿಂದ ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಎಸ್ಆರ್’ಟಿಸಿ ಬಸ್ ಕಿಟಕಿ ಗಾಜುಗಳನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ. ಜೂನ್ 2 ರ ಮಧ್ಯರಾತ್ರಿಯಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆಂಧ್ರದ ಶ್ರೀಶೈಲದಲ್ಲಿ ಚಾಲಕ ಮತ್ತು ನಿರ್ವಾಹಕ ಊಟಕ್ಕೆ ತೆರಳಿ ಪಕ್ಕದ ಕಟ್ಟೆಯ ಬಳಿ ಮಲಗಿದ್ದಾರೆ, ಇದೇ ವೇಳೆ ಏಕಾ ಏಕಿ ಬಂದ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.

ಕನ್ನಡಿಗರ ಬಗ್ಗೆ ಆಶ್ಲೀಲ ಪದ ಬಳಸಿ ಹಲ್ಲೆಕೋರರು ಥಳಿಸಿದ್ದಾರೆ ಎನ್ನಲಾಗಿದ್ದು ಚಾಲಕನ ಮುಖಕ್ಕೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದೆ. ರಾತ್ರಿ ಎಂಟು ಗಂಟೆಗೆ ಶ್ರೀಶೈಲ ಬಸ್ ಸ್ಟಾಪ್ಗೆ ಬಂದಿದ್ದೆವು. ಊಟ ಮಾಡಿ ಮಲಗಿದ್ದ ವೇಳೆ, ರಾತ್ರಿ ಒಂದು ಗಂಟೆಯ ಸುಮಾರಿಗೆ ಆಟೋದಲ್ಲಿ ಬಂದ 10ರಿಂದ 12 ಜನರ ತಂಡ ನಮ್ಮನ್ನು ಎಬ್ಬಿಸಿ ಹಲ್ಲೆ ನಡೆಸಿದೆ ಎಂದು ನಿರ್ವಾಹಕ ಮಾಹಿತಿ ನೀಡಿದ್ದಾರೆ.

Join Whatsapp
Exit mobile version