Home ಟಾಪ್ ಸುದ್ದಿಗಳು KSRTCಗೆ ‘ಬಾಬಾ ಸಾಹೇಬ್’ ಸಾರಿಗೆ ಸಂಸ್ಥೆ ಎಂದು ಮರುನಾಮಕರಣಕ್ಕೆ ಸಂಸದೆ ಸುಮಲತಾ ಒತ್ತಾಯ

KSRTCಗೆ ‘ಬಾಬಾ ಸಾಹೇಬ್’ ಸಾರಿಗೆ ಸಂಸ್ಥೆ ಎಂದು ಮರುನಾಮಕರಣಕ್ಕೆ ಸಂಸದೆ ಸುಮಲತಾ ಒತ್ತಾಯ

►“ನಮ್ಮ ಕರ್ನಾಟಕ ಸಾರಿಗೆ” ನಾಮಕರಣಕ್ಕೆ ಎಸ್ ಡಿಪಿಐ ಒತ್ತಾಯ

ಕೆಎಸ್ಆರ್ ಟಿಸಿಯ ಬ್ರಾಂಡ್ ಕೇರಳದ ಪಾಲಾದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ “ಬಾಬಾ ಸಾಹೇಬ್ ಸಾರಿಗೆ ಸಂಸ್ಥೆ’ ಎಂದು ಮರು ನಾಮಕರಣ ಮಾಡುವಂತೆ ಸಂಸದೆ ಸುಮಲತಾ ಅಂಬರೀಶ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ರಾಜ್ಯದ ಮೂಲೆ ಮೂಲೆಗೂ ತಲುಪಿ ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳ ಸೇವೆಯ ಟ್ರೇಡ್  ಮಾರ್ಕ್ 27 ವರ್ಷಗಳ ಕಾನೂನು ಹೋರಾಟದ ನಂತರ ಕೇರಳ ರಾಜ್ಯದ ಪಾಲಾಗಿರುವ ಹಿನ್ನೆಲೆಯಲ್ಲಿ ನಿಗಮಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ನೆನಪಿನಾರ್ಥ “ಬಾಬಾ ಸಾಹೇಬ್ ಸಾರಿಗೆ ಸಂಸ್ಥೆ” ಎಂದು ಮರು ನಾಮಕರಣ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಟ್ವೀಟ್ ಮಾಡಿ, ಕೆಎಸ್ ಆರ್ ಟಿಸಿ ಬ್ರಾಂಡ್ ಕೇರಳದ ಪಾಲಾದ ಕಾರಣ, ನಮ್ಮ ರಾಜ್ಯದ ಸಾರಿಗೆ ಇಲಾಖೆಗೆ “ನಮ್ಮ ಕರ್ನಾಟಕ ಸಾರಿಗೆ” (NKSRTC) ಎಂದು ಹೆಸರಿಡಲು ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Join Whatsapp
Exit mobile version