Home ಟಾಪ್ ಸುದ್ದಿಗಳು KRS ನಲ್ಲಿ ಮೋಜುಮಸ್ತಿ ಮಾಡಿದ ಪೊಲೀಸರ ವಿರುದ್ಧ ಕೇಸು ದಾಖಲಿಸುವಂತೆ ಸಾರ್ವಜನಿಕರ ಒತ್ತಾಯ

KRS ನಲ್ಲಿ ಮೋಜುಮಸ್ತಿ ಮಾಡಿದ ಪೊಲೀಸರ ವಿರುದ್ಧ ಕೇಸು ದಾಖಲಿಸುವಂತೆ ಸಾರ್ವಜನಿಕರ ಒತ್ತಾಯ

ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿನ್ನೀರಿನಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡಮಿಯ ಸದಸ್ಯರು ತಮ್ಮ ಪರಿವಾರದೊಂದಿಗೆ ಆಗಮಿಸಿ ಪಾರ್ಟಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಆಕ್ರೋಶಗೊಂಡ ಸಾರ್ವಜನಿಕರು ನಮಗೆ ನೀಡದ ಅವಕಾಶ ಅವರಿಗೆ ಮಾತ್ರ ಯಾಕೆ ಎಂದು ಕಿಡಿಕಾರಿದ್ದಾರೆ.

ಕೆ ಎಆರ್ ಎಸ್ ಡ್ಯಾಂ ಹಿನ್ನೀರಿನಲ್ಲೇ ಶಾಮಿಯಾನ ಹಾಕಲಾಗಿದೆ ಮತ್ತು ಭೋಜನಕೂಟ ಸೇರಿದಂತೆ ತಮ್ಮ ಕುಟುಂಬದ ಸದಸ್ಯರನ್ನೊಳಗೊಂಡು ಡ್ಯಾಂ ಹಿನ್ನೀರಿನ ನಿರ್ಬಂಧಿತ ಪ್ರದೇಶದಲ್ಲಿ ಮೋಜುಮಸ್ತಿ ನಡೆಸಿದ್ದಾರೆ. ಆ ಭಾಗದಲ್ಲಿ  ಸಾರ್ವಜನಿಕರಿಗೆ ನಡೆದಾಡುವ ಅವಕಾಶವನ್ನೂ ಅಧಿಕಾರಿಗಳು ಕಲ್ಪಿಸುವುದಿಲ್ಲ. ಹೀಗಿರುವಾಗ ಶಾಮಿಯಾನ ಹಾಕಲು ಭೋಜನಕೂಟ ಏರ್ಪಡಿಸಲು ಅನುಮತಿ ಮಡಿಕೊಟ್ಟಿದ್ದಕ್ಕೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

ಈ ಹಿಂದೆ ಅಲ್ಲಿ ಪಾರ್ಟಿ ಮಾಡಿದ್ದಕ್ಕೆ ಅಂಥಹವರ ವಿರುದ್ಧ ಆಯೋಜಕರು ದೂರು ನೀಡಿ ಪೊಲೀಸರು ಕೇಸು ದಾಖಲಿಸಿದ್ದರು. ಈಗ ಪೊಲೀಸರೇ ಅಲ್ಲಿ ಮೋಜುಮಸ್ತಿ ಮಾಡಿದ್ದಾರೆ,ಅವರ ವಿರುದ್ಧ ಕ್ರಮಕೈಗೊಳ್ಳುವವರಾರು ಎಂದು ಪ್ರಶ್ನಿಸಿದ್ದಾರೆ. ಹಾಗೆಯೆ ಪೊಲೀಸರ ವಿರುದ್ಧವೂ ದೂರು ದಾಖಲಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Join Whatsapp
Exit mobile version