Home ಟಾಪ್ ಸುದ್ದಿಗಳು ಕಾಂಗ್ರೆಸ್ ಕಚೇರಿಯಲ್ಲಿ ಕೃಷ್ಣ ಉಪಾಧ್ಯಾಯನಿಂದ ಆಯುಧ ಪೂಜೆಗೆ ನೇತೃತ್ವ: ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹ

ಕಾಂಗ್ರೆಸ್ ಕಚೇರಿಯಲ್ಲಿ ಕೃಷ್ಣ ಉಪಾಧ್ಯಾಯನಿಂದ ಆಯುಧ ಪೂಜೆಗೆ ನೇತೃತ್ವ: ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹ

►ಶಕುಂತಲಾ ಬಿಜೆಪಿ ತೊರೆದರೂ ಕಮಲ ಸಿದ್ದಾಂತ ಬಿಟ್ಟಿಲ್ಲ ಎಂಬ ಆರೋಪ

ಪುತ್ತೂರು: ಇಸ್ಲಾಂ ವಿರೋಧಿ ಹೇಳಿಕೆಗಳ ಮೂಲಕ ಕುಖ್ಯಾತಿ ಪಡೆದಿರುವ ಕೃಷ್ಣ ಉಪಾಧ್ಯಾಯ ಎಂಬಾತನ ಮೂಲಕ ಕಚೇರಿಯಲ್ಲಿ ಆಯುಧ ಪೂಜೆ ಏರ್ಪಡಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಅಲ್ಪ ಸಂಖ್ಯಾತ ಘಟಕದ ಮುಖ್ಯಸ್ಥ ಇಸಾಕ್ ಸಾಲ್ಮರ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು , ಸುಮಾರು 46 ಸಾವಿರ ಮುಸ್ಲಿಂ ಮತದಾರರು ಇರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮುಕ್ಕಾಲು ಶೇಕಡಾ ಜನರು ಕಾಂಗ್ರೆಸ್ಸನ್ನು ಬೆಂಬಲಿಸುತ್ತಾರೆ. ಆದರೂ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಲಾದ ಆಯುಧ ಪೂಜೆಗೆ ಸಂಘ ಪರಿವಾರದ ಉದ್ರೇಕಕಾರಿ ಭಾಷಣಗಾರ ಕೃಷ್ಣ ಉಪಾಧ್ಯಾಯ ಎಂಬಾತನನ್ನು ಆಹ್ವಾನಿಸಿ ಪೂಜೆಗೆ ನೇತೃತ್ವ ನೀಡುವಂತೆ ಮಾಡಿದ ಬ್ಲಾಕ್ ಅಧ್ಯಕ್ಷರ ನಡೆ ಖಂಡನೀಯ. ಆದ್ದರಿಂದ ಅವರು ಶೀಘ್ರವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಬ್ಲಾಕ್ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಲಿದಿದ್ದರೆ , ಇದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ರನ್ನು ಕರೆತಂದು ಪುತ್ತೂರಿನಲ್ಲಿ ಸಮಾವೇಶ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಕುಂತಲಾ ಬಿಜೆಪಿ ತೊರೆದರೂ ಕಮಲ ಸಿದ್ದಾಂತ ಬಿಟ್ಟಿಲ್ಲ ಎಂಬ ಆರೋಪ


ಬಿಜೆಪಿಯಿಂದ ಕಾಂಗ್ರೆಸ್ ಗೆ ಬಂದ ಶಾಸಕಿ ಶಕುಂತಲಾ ಶೆಟ್ಟಿ ತಮ್ಮ ಹಳೆಯ ಬಿಜೆಪಿ ಕೋಮುವಾದಿ ಸಿದ್ದಾಂತವನ್ನು ಬಿಟ್ಟಿಲ್ಲ. ಪಕ್ಷದಲ್ಲಿ ಅವರು ಕೋಮುವಾದ ಹರಡುವ ಕೆಲಸ ಮಾಡುತ್ತಿದ್ದಾರೆ. ಅಲ್ಪ ಸಂಖ್ಯಾತರನ್ನು ಕಡೆಗಣಿಸುತ್ತಿದ್ದಾರೆ. ರಾಹುಲ್ ಗಾಂಧೀಯ ಜೋಡೋ ಯಾತ್ರೆ ರಾಜ್ಯಕ್ಕೆ ಆಗಮಿಸುವ ದಿನವೇ ಅವರು ಪುತ್ತೂರಿನಲ್ಲಿ ಆರ್ರೆಸ್ಸೆಸ್ ಮತ್ತು ಬಿಜೆಪಿ ನಾಯಕರನ್ನು ಸೇರಿಸಿ ಪಿಲಿ ರಂಗ್ ಕಾರ್ಯಕ್ರಮ ಆಯೋಜಿಸಿದ್ದರು. ಕೃಷ್ಣ ಉಪಾಧ್ಯಾಯ ಮೂಲಕವೇ ಪೂಜೆ ಮಾಡಿಸಿ ಉದ್ಘಾಟಿಸಿದ್ದಾರೆ.

ಹೀಗೆ ಪಕ್ಷದ ಸಿದ್ದಾಂತಕ್ಕೆ ವಿರುದ್ಧವಾದವರು ಮತ್ತು ಕೋಮುವಾದಿ ಮನಸ್ಥಿತಿಯನ್ನು ಹೊಂದಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Join Whatsapp
Exit mobile version