ಉತ್ತರ ಪ್ರದೇಶ: ವಿಧಾನಸಭೆಯಲ್ಲಿ ಸಿಎಂ ಆದಿತ್ಯನಾಥ್, ಮಥುರಾ ಕೂಡ ಬಿಜೆಪಿಯ ಆದ್ಯತೆಯ ಪಟ್ಟಿಯಲ್ಲಿದೆ ಎಂದು ಮತ್ತೊಂದು ಸುಳಿವು ನೀಡಿದ್ದಾರೆ. ಮಥುರಾ ವಿಚಾರ ಪ್ರಸ್ತಾಪಿಸಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ “ನಂದಿ ಬಾಬಾ” ತಾನು ಇನ್ನೇಕೆ ಕಾಯಬೇಕು ಎಂದು ಯೋಚಿಸುತ್ತಿದೆ ಎಂದು ಹೇಳಿದ್ದಾರೆ.
ಅಯೋಧ್ಯೆ, ಕಾಶಿ ಮತ್ತು ಮಥುರಾಗೆ ಅನ್ಯಾಯವಾಗಿದೆ. ಈ ಹಿಂದೂ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಇದಕ್ಕೆ ಉತ್ತರಿಸಬೇಕು ಎಂದು ಆದಿತ್ಯನಾಥ್ ಹೇಳಿದ್ದಾರೆ.
ಕೃಷ್ಣ ಕೌರವರ ಬಳಿಗೆ ಹೋಗಿ, ನಮಗೆ ಕೇವಲ ಐದು ಹಳ್ಳಿಗಳನ್ನು ನೀಡಿ, ನಿಮ್ಮಲ್ಲಿರುವ ಎಲ್ಲಾ ಭೂಮಿಯನ್ನು ಇಟ್ಟುಕೊಳ್ಳಿ ಎಂದು ಹೇಳಿದ್ದರು. ಪಾಂಡವರಿಗೆ ಅರೆಬರೆಯಾದರೂ ನ್ಯಾಯ ಕೊಡಿ, ಅವರು ಸಂತೋಷದಿಂದ ಊಟ ಮಾಡುತ್ತಾರೆ ಅಂತ ಕೃಷ್ಣ ಮನವಿ ಮಾಡಿದ್ದರು. ನಾವು ಅಯೋಧ್ಯೆ ಬಳಿಕ ಕಾಶಿ ಮತ್ತು ಮಥುರಾದ ಜಾಗಗಳನ್ನು ಕೇಳುತ್ತಿದ್ದೇವೆ ಎಂದು ಆದಿತ್ಯನಾಥ್ ಹೇಳಿದ್ದಾರೆ.