ಚಿಲ್ಡ್ರನ್ಸ್ ಹೋಮ್ ನಿಂದ ಆರು ಬಾಲಕಿಯರು ನಾಪತ್ತೆ; ತನಿಖೆ ಆರಂಭಿಸಿದ ಪೊಲೀಸರು

Prasthutha|

ತಿರುವನಂತಪುರಂ: ಕಲ್ಲಿಕೋಟೆಯ ವೆಳ್ಳಿಮಾಡುಕುನ್ನು ಚಿಲ್ಡ್ರನ್ಸ್ ಹೋಮ್ ನಿಂದ ಆರು ಬಾಲಕಿಯರು ನಾಪತ್ತೆಯಾಗಿದ್ದಾರೆ. ಪೊಲೀಸರು ನಾಪತ್ತೆಯಾದ ಬಾಲಕಿಯರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.

- Advertisement -

ಚಿಲ್ಡ್ರನ್ಸ್ ಹೋಮ್ ಸೂಪರಿಡೆಂಟ್, ಸಿಡಬ್ಲ್ಯೂಸಿ ಮತ್ತು ಚೇವಾಯೂರ್ ಪೊಲೀಸರಿಂದ ಈ ಕುರಿತು ಮಕ್ಕಳ ಹಕ್ಕು ಆಯೋಗ ವರದಿ ಕೇಳಿದೆ. ಆಯೋಗದ ಸದಸ್ಯೆ ಬಿ. ಬಬಿತಾ ಚಿಲ್ಡ್ರನ್ಸ್ ಹೋಮ್ ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.


ಇಬ್ಬರು ಸಹೋದರಿಯರು ಸೇರಿದಂತೆ ಆರು ಮಕ್ಕಳು ನಾಪತ್ತೆಯಾಗಿದ್ದು, ಘಟನೆಯ ತನಿಖೆ ಪ್ರಗತಿಯಲ್ಲಿದೆ. ಪೊಲೀಸರು ಸಮೀಪದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Join Whatsapp