Home ಟಾಪ್ ಸುದ್ದಿಗಳು ದೇವಾಲಯದ ಉತ್ಸವದಲ್ಲಿ ಭಾಗಿಯಾದ 20 ಮಂದಿಗೆ ಕೋವಿಡ್, ಮಹಿಳೆ ಸಾವು

ದೇವಾಲಯದ ಉತ್ಸವದಲ್ಲಿ ಭಾಗಿಯಾದ 20 ಮಂದಿಗೆ ಕೋವಿಡ್, ಮಹಿಳೆ ಸಾವು

ಚೆನ್ನೈ: ಚೆನ್ನೈನ ಕಿಲ್ಪಾಕ್ ಬಳಿಯ ವರದಮ್ಮಾಲ್ ಗಾರ್ಡನ್ ಸ್ಟ್ರೀಟ್‌ ನಲ್ಲಿ ಆಗಸ್ಟ್ 2 ರಂದು ದೇವಾಲಯದ ಉತ್ಸವದಲ್ಲಿ ಪಾಲ್ಗೊಂಡಿದ್ದ 20 ಜನರಿಗೆ ಕೋವಿಡ್ ದೃಢಪಟ್ಟಿದೆ. 

ದೇವಾಲಯದಲ್ಲಿ  ವಾರ್ಷಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 300 ಜನರು ಭಾಗವಹಿಸಿದ್ದರು. ಈ ಪೈಕಿ 47 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಆಕೆಗೆ ಸಕ್ಕರೆ ಕಾಯಿಲೆ ಇತ್ತು, ಕೋವಿಡ್ ಲಸಿಕೆ ಹಾಕಿರಲಿಲ್ಲ ಎಂದು ತಿಳಿದು ಬಂದಿದೆ.

ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಿಗೆ ಕೋವಿಡ್ ದೃಢಪಟ್ಟ ನಂತರ ಕೋವಿಡ್ -19 ಕ್ಲಸ್ಟರ್ ಅನ್ನು ಗುರುತಿಸಿದ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ),ಸೋಂಕು ಹರಡುವುದನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರೊಂದಿಗೆ ನಿಕಟ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚುವುದು ಮತ್ತು ಪರೀಕ್ಷಿಸುವುದನ್ನು ಜಿಸಿಸಿ ಮಾಡಿದೆ ಎಂದು ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version