ಮಂಗಳೂರು: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಕಡಿರುದ್ಯಾವರದಲ್ಲಿ ಕಂದಾಯ ಇಲಾಖೆಯವರು ಅರ್ಹ ಫಲಾನುಭವಿಗಳಿಗೆ ಜಮೀನು ನೀಡಿದ್ದರೂ, ಅರಣ್ಯ ಇಲಾಖೆ ಆ ಜಾಗದ ಬಗ್ಗೆ ಹೈಕೋರ್ಟಿನಲ್ಲಿ ಹೂಡಿರುವ ಮೇಲ್ಮನವಿಯನ್ನು ಹಿಂಪಡೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಬೆಳ್ತಂಗಡಿ ತಾಲೂಕು ಇಂದಬೆಟ್ಟು – ಕಡಿರುದ್ಯಾವರ ಎಂಬಲ್ಲಿ ಕಂದಾಯ ಇಲಾಖೆಯವರು ಜಂಟಿ ಸಮೀಕ್ಷೆ ನಡೆಸಿ, ಅದು ಕಂದಾಯ ಜಮೀನು ಎಂದು ಅದನ್ನು ಐದು ಕುಟುಂಬಗಳಿಗೆ ನೀಡಿದ್ದರು. ಆದರೆ, ಅದನ್ನು ಪ್ರಶ್ನಿಸಿ ಅರಣ್ಯ ಇಲಾಖೆಯವರು ಇಲಾಖೆಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ, ಈ ಮೇಲ್ಮನವಿಯನ್ನು ಹಿಂಪಡೆದು, ಆ ಬಡ ಕುಟುಂಬಗಳು ಜೀವನ ನಡೆಸಲು ಅನುಕೂಲ ಮಾಡಿಕೊಡುವಂತೆ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ಅವರಿಗೆ ಸೂಕ್ಷಿಸಿದ್ದೇನೆ. ಇದು ಕೆಡಿಪಿ ಸಭೆಯ ನಿರ್ಣಯ ಕೂಡ ಆಗಿದೆ ಎಂದರು.