Home ಕರಾವಳಿ ಮಂಗಳೂರು: ಆಸ್ಪತ್ರೆ ಶುಲ್ಕ ರದ್ದು ವಿರೋಧಿಸಿ ಕೊರಗ ಜನಾಂಗದಿಂದ ಪ್ರತಿಭಟನಾ ಮೆರವಣಿಗೆ

ಮಂಗಳೂರು: ಆಸ್ಪತ್ರೆ ಶುಲ್ಕ ರದ್ದು ವಿರೋಧಿಸಿ ಕೊರಗ ಜನಾಂಗದಿಂದ ಪ್ರತಿಭಟನಾ ಮೆರವಣಿಗೆ

ಮಂಗಳೂರು: ಬುಡಕಟ್ಟು ಅತಿ ಹಿಂದುಳಿದ ಕೊರಗ ಜನಾಂಗದವರ ಆಸ್ಪತ್ರೆ ಶುಲ್ಕ ಪಾವತಿಯನ್ನು ರದ್ದು ಪಡಿಸಿರುವುದನ್ನು ಪ್ರತಿಭಟಿಸಿ ನೂರಾರು ಕೊರಗ ಜನಾಂಗದವರು ಮಂಗಳವಾರ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.


ಕೊರಗ ಜನಾಂಗದ ಮುಖಂಡ ಸುಂದರ ಅವರ ನಾಯಕತ್ವದಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ, ಗೋಕುಲ್ ದಾಸ್, ಕುದ್ಮುಲ್ ಫೋಟೋಗಳಿಗೆ ಹೂ ಮಾಲಾರ್ಪಣೆ ಬಳಿಕ ಮೆರವಣಿಗೆ ಆರಂಭವಾಯಿತು. ಮನವಿ ಸಲ್ಲಿಸುವುದರೊಂದಿಗೆ ಘೋಷಣೆ ಇಲ್ಲದ ಪ್ರತಿಭಟನಾ ಮೆರವಣಿಗೆ ಕೊನೆಗೊಂಡಿತು.


ವೆನ್ ಲಾಕ್ ಆಸ್ಪತ್ರೆ ಪ್ರಮುಖರಿಗೆ ಮನವಿಯ ಪ್ರತಿಯನ್ನು ಸಲ್ಲಿಸಲಾಯಿತು. ಮುಖಂಡರಾದ ಶಶಿಕಲಾ ಕೋಡಿಕಲ್, ರಮೇಶ್ ಎಡಪದವು, ಕೊಗ್ಗ ಕೋಡಿಕಲ್, ಗೌರಿ ಕೆಂಜೂರು, ಬಾಬು ಪಾಂಗಾಳ, ಚಂದ್ರಾವತಿ ಉಜಿರೆ, ಕಿರಣ್ ಗುಂಡಾವು ಮತ್ತಿತರರು ಪಾಲ್ಗೊಂಡಿದ್ದರು.

Join Whatsapp
Exit mobile version