ಕೊಲ್ಕತ್ತಾದ “ಬುರ್ಜ್ ಖಲೀಫಾ” ನೋಡಲು ಜನಸಾಗರ

Prasthutha|

► ಪೈಲಟ್ ಗಳ ದೂರಿನ ಬಳಿಕ ಲೇಸರ್ ಶೋ ರದ್ದು

- Advertisement -


ಕೋಲ್ಕತ್ತಾ; ವಿಶ್ವದ ಅತ್ಯಂತ ಎತ್ತರದ ಗಗನಚುಂಬಿ ಕಟ್ಟಡ, ದುಬೈನಲ್ಲಿರುವ ಬುರ್ಜ್ ಖಲೀಫಾದ ಮಾದರಿಯಲ್ಲಿ ಕೋಲ್ಕತ್ತಾದಲ್ಲಿ ನಿರ್ಮಿಸಲಾಗಿರುವ ಪೆಂಡಾಲ್ ನೋಡಲು ಜನಸಾಗರವೇ ಹರಿದುಬರುತ್ತಿದೆ.ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದ ಸಮೀಪವೇ ದುರ್ಗಾ ಪೂಜೆಯ ನಿಮಿತ್ತ ಬುರ್ಜ್ ಖಲೀಫಾ ಮಾದರಿಯ ಬೃಹತ್ ಪೆಂಡಾಲ್ ಹಾಕಲಾಗಿದೆ. ಇದರ ಜೊತೆಗೆ ದುಬೈನ ರೀತಿಯಲ್ಲೇ ಇಲ್ಲೂ ಲೇಸರ್ ಶೋ ಆಯೋಜಿಸಲಾಗಿತ್ತು.


ಆದರೆ ಲೇಸರ್ ಶೋ ಕಾರಣದಿಂದಾಗಿ ವಿಮಾನದ ಲ್ಯಾಂಡಿಂಗ್’ ಗೆ ತೊಂದರೆಯಾಗುವುದಾಗಿ ಮೂವರು ಪೈಲೆಟ್ ‘ಗಳು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ದೂರು ನೀಡಿದ ಪರಿಣಾಮ “ಬುರ್ಜ್ ಖಲೀಫಾ” ದ ಲೇಸರ್ ಶೋ ರದ್ದುಗೊಳಿಸಲಾಗಿದೆ.

- Advertisement -


ಪೆಂಡಾಲ್ ನಿರ್ಮಿಸುವ ಮೊದಲು ಸಂಘಟಕರು ಸ್ವತಃ ದುಬೈಗೆ ಹೋಗಿ ಮಾಹಿತಿ ಪಡೆದಿದ್ದರು. ಬಳಿಕ
ವಿಮಾನ ನಿಲ್ದಾಣ ಪ್ರಾಧಿಕಾರ ಅನುಮತಿ ನೀಡಿದ್ದ ಎತ್ತರಕ್ಕೆ ಈ ಪೆಂಡಾಲ್ ನಿರ್ಮಿಸಲಾಗಿತ್ತು. ಸ್ವತಃ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುರ್ಜ್ ಖಲೀಫಾ ಪೆಂಡಾಲ್ ಹಾಗೂ ಲೇಸರ್ ಶೋಗೆ ಚಾಲನೆ ನೀಡಿದ್ದರು. ಆದರೆ ಇದೀಗ ಪೈಲೆಟ್’ಗಳ ದೂರಿನ ಹಿನ್ನೆಲೆಯಲ್ಲಿ ಲೇಸರ್ ಶೋ ರದ್ದುಗೊಳಿಸಲಾಗಿದೆ.

Join Whatsapp