Home ಟಾಪ್ ಸುದ್ದಿಗಳು ಕೋಲ್ಕತ್ತಾ: ಆರ್‌ಜಿ ಕರ್ ಆಸ್ಪತ್ರೆ ಮಾಜಿ ಪ್ರಾಂಶುಪಾಲ ಆಪ್ತನಿಂದ 8 ಕೋ. ರೂ. ಮೌಲ್ಯದ ಚಿನ್ನ...

ಕೋಲ್ಕತ್ತಾ: ಆರ್‌ಜಿ ಕರ್ ಆಸ್ಪತ್ರೆ ಮಾಜಿ ಪ್ರಾಂಶುಪಾಲ ಆಪ್ತನಿಂದ 8 ಕೋ. ರೂ. ಮೌಲ್ಯದ ಚಿನ್ನ ED ವಶಕ್ಕೆ

ಕೋಲ್ಕತ್ತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜ್ & ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್‌ ಆಪ್ತ ಎನ್ನಲಾದ ಉದ್ಯಮಿಯಿಂದ 8 ಕೋಟಿ ರೂ. ಮೌಲ್ಯದ ಚಿನ್ನವನ್ನು ED ವಶಪಡಿಸಿಕೊಂಡಿದೆ.

ತನಿಖೆಯ ಭಾಗವಾಗಿ ಕೋಲ್ಕತ್ತಾ ಮತ್ತು ಹೌರಾ ಸೇರಿದಂತೆ ಅನೇಕ ಸ್ಥಳಗಳಲ್ಲಿ ಘೋಷ್ ಮತ್ತು ಅವರ ಮೂವರು ಸಹಚರರ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿತು. ದಾಳಿಯ ನಂತರ, ಸಂಸ್ಥೆಯು ಡಾ ಘೋಷ್ ಅವರ ಆಪ್ತ ಸಹಾಯಕ ಪ್ರಸೂನ್ ಚಟರ್ಜಿಯನ್ನು ಬಂಧಿಸಿತು. ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಚಟರ್ಜಿಯನ್ನು ಪಶ್ಚಿಮ ಬಂಗಾಳದ ಕ್ಯಾನಿಂಗ್ ಟೌನ್‌ನಲ್ಲಿರುವ ಘೋಷ್ ಅವರ ಆಸ್ತಿಗೆ ಕರೆದೊಯ್ಯಲಾಯಿತು.

ಡಾ. ಘೋಷ್ ಕೋಲ್ಕತ್ತಾ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಸಿಬಿಐ ಕೂಡ ಡಾ. ಘೋಷ್ ವಿರುದ್ಧ ಆಸ್ಪತ್ರೆಯಲ್ಲಿ ಹಲವು ಹಣಕಾಸು ಅಕ್ರಮಗಳ ಆರೋಪ ಹೊರಿಸಿದೆ. ಉದ್ಯಮಿಯನ್ನು ಅವರ ಸಾಲ್ಟ್ ಲೇಕ್ ಮನೆಯಿಂದ ಇಡಿ ಕರೆತಂದಿತ್ತು. ಅಲ್ಲದೆ ಡಾ. ಘೋಷ್ ವಿರುದ್ಧ ಆರೋಪಿಸಲಾಗಿರುವ ವೈದ್ಯಕೀಯ ಹಗರಣಗಳಿಂದ ಪಡೆದ ಅಕ್ರಮ ಹಣವನ್ನು ಇಟ್ಟುಕೊಂಡಿರುವ ಇತರ ಸಂಪರ್ಕಗಳನ್ನು ಸಹ ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ.

Join Whatsapp
Exit mobile version