Home ಟಾಪ್ ಸುದ್ದಿಗಳು ಕೃಷಿ ಕಾಯ್ದೆ ವಿರೋಧಿ ಶವಯಾತ್ರೆಗೆ ಆಗಮಿಸಿದ ಕೋಡಿಹಳ್ಳಿ ಚಂದ್ರಶೇಖರ್ ಬಂಧನ

ಕೃಷಿ ಕಾಯ್ದೆ ವಿರೋಧಿ ಶವಯಾತ್ರೆಗೆ ಆಗಮಿಸಿದ ಕೋಡಿಹಳ್ಳಿ ಚಂದ್ರಶೇಖರ್ ಬಂಧನ

►ಮೋದಿ, ಯಡಿಯೂರಪ್ಪ ಸರಕಾರ ಜನರ ಧ್ವನಿಯನ್ನು ಹತ್ತಿಕ್ಕುತ್ತಿದೆ: ಕೋಡಿಹಳ್ಳಿ

ಬೆಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ 3 ರೈತ ವಿರೋಧಿ ಕೃಷಿ ಕಾಯ್ದೆಯ ವಿರುದ್ಧ ಕಳೆದ 120 ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆಗೆ ಸರಕಾರ ಕವಡೆ ಕಾಸಿನ ಬೆಲೆ ನೀಡಿದೆ ವಂಚಿಸಿದೆ ಮತ್ತು ಅನ್ನದಾತರ ಬೇಡಿಕೆಯನ್ನು ಪೂರೈಸದೆ ಸರಕಾರ ರೈತರ ಬೆನ್ನುಮೂಳೆ ಮುರಿಯಲು ಹೊರಟಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಇಂದು ಭಾರತ್ ಬಂದ್ ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಸಂಯುಕ್ತ ಹೋರಾಟ ಕರ್ನಾಟಕವು ಕರೆ ನೀಡಿತ್ತು.

ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ತೈಲ ಗ್ಯಾಸ್, ದಿನಬಳಕೆ ಮತ್ತು ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಇದರ ಸರಿ ಮಾಡುವ ದಿಕ್ಕಿನಲ್ಲಿ ಸರಿಮಾಡುವ ಸರಕಾರದ ವೈಫಲ್ಯ ಮುಚ್ಚಿ ಹಾಕಿಕೊಳ್ಳುವುದಕ್ಕೆ ಪ್ರತಿಭಟನಾಕಾರರನ್ನು ಬಂಧನ ಮಾಡುವುದೇ ಸರಕಾರದ ಕಾರ್ಯಕ್ರಮವಾದರೆ ಇದು ಸರಕಾರದ ಅತ್ಯಂತ ನಾಚಿಕೆಗೇಡಿನ ಕ್ರಮ. ಇದನ್ನು ನಾವು ಖಂಡಿಸುತ್ತೇವೆ.

ಪ್ರಜಾಪ್ರಭುತ್ವ ಉಳಿಸಲು ರೈತರು ಹೋರಾಟವನ್ನು ನಡೆಸುತ್ತಿದ್ದು, ಸರಕಾರ ತನ್ನ ವೈಫಲ್ಯವನ್ನು ಮರೆಮಾಚಲು ಈ ರೀತಿಯ ಕ್ರಮಕ್ಕೆ ಮುಂದಾಗುತ್ತಿದೆ. ಪ್ರತಿಭಟನೆ ಜನಸಾಮಾನ್ಯರ ಸಂವಿಧಾನಿಕ ಹಕ್ಕು. ಅದನ್ನು ಸರಕಾರ ಕಸಿದುಕೊಳ್ಳುವ ಮೂಲಕ ಜನಸಾಮಾನ್ಯರ ಧ್ವನಿಯನ್ನು ಹತ್ತಿಕ್ಕುತ್ತಿದೆ. ಪ್ರಜಾಪ್ರಭುತ್ವ ವಿರೋಧ ನೀತಿಯನ್ನು ಧಿಕ್ಕರಿಸುತ್ತೇವೆ.‌ ಯಡಿಯೂರಪ್ಪ ಮತ್ತು ನರೇಂದ್ರ ಮೋದಿಯವರ ಈ ವರ್ತನೆ ಅವರಿಗೆ ಭೂಷಣವಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಯಾವುದೇ ರೀತಿಯ ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ರೈತ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಟೌನ್ ಹಾಲ್ ಮುಂಭಾಗ ಸಾಕಷ್ಟು ಪೊಲೀಸರನ್ನು ನಿಯೋಜನೆಗೊಳಿಸಲಾಗಿದ್ದು, ಪ್ರತಿಭಟನಾಕಾರರು ಬಂದ ತಕ್ಷಣವೇ ಅವರನ್ನು ಬಂಧಿಸಲಾಗುತ್ತಿದೆ.

Join Whatsapp
Exit mobile version