ಮಡಿಕೇರಿ: ಜನನಿಬಿಡ ಪ್ರದೇಶದಲ್ಲಿ ಕಾಡಾನೆಯೊಂದು ಘೀಳುಡುತ್ತಾ ಓಡಾಡಿದ ಘಟನೆ ನಡೆದಿದೆ.
ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಎಂ.ಜಿ ಕಾಲೋನಿಯಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ ಮನೆಗಳ ಸುತ್ತಮುತ್ತ ಓಡಾಡಿದೆ. ಇದರಿಂದ ಭಯಭೀತರಾದ ಗ್ರಾಮಸ್ಥರು ಕಿರುಚಾಡಿದ್ದಾರೆ. ಶಾಲೆಗಳಿಗೆ ರಜೆ ಇದ್ದರಿಂದ ಮಕ್ಕಳು ಮನೆಗಳ ಅಂಗಳದಲ್ಲೇ ಇದ್ದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕಾಡಾನೆಯ ಕಾಲಿಗೆ ಪೆಟ್ಟಾಗಿದೆ ಎನ್ನಲಾಗಿದೆ. ಕೂಡಲೇ ಕಾಡಾನೆಯನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.