Home ಟಾಪ್ ಸುದ್ದಿಗಳು ಕೊಡಗು: ಮುಂದುವರಿದ ವರುಣಾರ್ಭಟ; ಭಾರಿ ಮಳೆಗೆ ಉರುಳಿ ಬಿದ್ದ ಬಂಡೆ

ಕೊಡಗು: ಮುಂದುವರಿದ ವರುಣಾರ್ಭಟ; ಭಾರಿ ಮಳೆಗೆ ಉರುಳಿ ಬಿದ್ದ ಬಂಡೆ

ಕೊಡಗು:  ಜಿಲ್ಲೆಯಾದ್ಯಂತ ನಿರಂತರ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಭಾರೀ ಮಳೆಯಿಂದಾಗಿ ಭಾಗಮಂಡಲದಿಂದ 4 ಕಿ.ಮೀ ದೂರದಲ್ಲಿ ರಸ್ತೆಗೆ ಬಂಡೆ ಉರುಳಿ ಬಿದ್ದು ,ಭಾಗಮಂಡಲ – ತಲಕಾವೇರಿ ಸಂಚಾರ ಅಸ್ತವ್ಯಸ್ತವಾಗಿದೆ.

ಗಾಳಿ ಮಳೆಗೆ ಮಡಿಕೇರಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ವಿದ್ಯುತ್ ಕಂಬಗಳು ಸಹ ನೆಲಕ್ಕೆ ಉರುಳಿ ಬಿದ್ದಿದ್ದು, ಸುತ್ತಮುತ್ತಲಿನ  ಗ್ರಾಮಗಳಲ್ಲಿ ರಾತ್ರಿಯಿಂದಲೇ ವಿದ್ಯುತ್ ಕಡಿತಗೊಂಡಿದೆ.

ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮೊಣ್ಣಂಗೇರಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಣ್ಣು ಕುಸಿತವುಂಟಾಗಿದ್ದು,  2ನೇ ಮೊಣ್ಣಂಗೇರಿ – ರಾಮಕೊಲ್ಲಿ ಸಂಪರ್ಕ ಕಲ್ಪಿಸುವ ಸೇತುವೆ  ಕೂಡ ಬಿರುಕು ಬಿಟ್ಟಿದೆ.

ನಿರಂತರ ಮಳೆಯಿಂದಾಗಿ ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಿದೆ. ನಾಪೋಕ್ಲು- ಭಾಗಂಡಲ, ಮಡಿಕೇರಿ – ಭಾಗಮಂಡಲ ರಸ್ತೆಯೂ ಮುಳುಗಡೆಯಾಗಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಕುಶಾಲನಗರ ಸೇರಿದಂತೆ ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿರುವುದರಿಂದ ಪ್ರವಾಹದ ಆತಂಕ ಎದುರಾಗಿದೆ.

Join Whatsapp
Exit mobile version