Home ಟಾಪ್ ಸುದ್ದಿಗಳು ಕೊಡಗು: ನಿವೇಶನಕ್ಕಾಗಿ ಬುಡಕಟ್ಟು ಜನಾಂಗದಿಂದ ಆಹೋರಾತ್ರಿ ಧರಣಿ

ಕೊಡಗು: ನಿವೇಶನಕ್ಕಾಗಿ ಬುಡಕಟ್ಟು ಜನಾಂಗದಿಂದ ಆಹೋರಾತ್ರಿ ಧರಣಿ

ಮಡಿಕೇರಿ: ಕೊಡಗು ಜಿಲ್ಲೆಯ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸವಿರುವ ಬುಡಕಟ್ಟು ಕಾರ್ಮಿಕರಿಗೆ ನಿವೇಶನದ ಹಕ್ಕುಪತ್ರಗಳನ್ನು ಒದಗಿಸುವಂತೆ ಒತ್ತಾಯಿಸಿ ಬುಡಕಟ್ಟು ಕಾರ್ಮಿಕ ಸಂಘದಿಂದ ಪೊನ್ನಂಪೇಟೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಯುತ್ತಿದೆ.

ಬುಡಕಟ್ಟು ಗಿರಿಜನರಿಗೆ ಮನೆ ಹಾಗೂ ನಿವೇಶನ ದೊರಕುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಗ್ರಾಮೀಣ ಭಾಗಗಳಲ್ಲಿನ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಬುಡಕಟ್ಟು ಸಮುದಾಯದ ಮಂದಿ ಬದುಕಿಗೊಂದು ಸೂರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮುದಾಯದ ಸಹಸ್ರಾರು ಮಂದಿ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ವಾಸವಿದ್ದಾರೆ. ಇವರಿಗೆ ಅವರದೇ ಆದ ಜಾಗ ನೀಡಬೇಕು, ಸೂರು ಕಲ್ಪಿಸಿಕೊಡಬೇಕೆಂದು ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ಹಾಗೂ ಸಚಿವರುಗಳಿಗೆ ಮನವಿ ಸಲ್ಲಿಸಿಕೊಂಡು ಬಂದಿದ್ದರು ಸೂಕ್ತ ಸ್ಪಂದನ ದೊರಕಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲೆಯ ವಿವಿಧ ಗಿರಿಜನ ಹಾಡಿಗಳಲ್ಲಿ ಹಾಗೂ ತೋಟದ ಲೈನ್ ಮನೆಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯವಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೂ ಆಹೋರಾತ್ರಿ ಧರಣಿ ಮುಂದುರೆಯಲಿದೆ ಎಂದು ಪ್ರಮುಖರು ಎಚ್ಚರಿಸಿದ್ದಾರೆ.

Join Whatsapp
Exit mobile version