Home ಟಾಪ್ ಸುದ್ದಿಗಳು ಕೊಡಗು: ಸಮಾಜದ ನಿಂದನೆಗೆ ಮನನೊಂದು ದಯಾಮರಣಕ್ಕೆ ಅನುಮತಿ ಕೋರಿದ ಮಂಗಳಮುಖಿ

ಕೊಡಗು: ಸಮಾಜದ ನಿಂದನೆಗೆ ಮನನೊಂದು ದಯಾಮರಣಕ್ಕೆ ಅನುಮತಿ ಕೋರಿದ ಮಂಗಳಮುಖಿ

ಮಡಿಕೇರಿ: ದಯಾಮರಣಕ್ಕೆ ಅನುಮತಿ ನೀಡಿ ಎಂದು ಮಂಗಳಮುಖಿಯೊಬ್ಬರು ಬೇಡಿಕೊಂಡ ಘಟನೆ ಮಡಿಕೇರಿಯಲ್ಲಿ ನಡೆದಿದೆ.


ಮಡಿಕೇರಿಯಲ್ಲಿ ವಾಸ ಮಾಡುತ್ತಿರುವ ರಿಹಾನ ಎಂಬವರು ಸಮಾಜದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಮಂಗಳಮುಖಿ .


ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮಂಗಳಮುಖಿಯಾದ ಕಾರಣ ಸ್ಥಳೀಯರು ಮನೆ ಕೊಡಲು ನಿರಾಕರಣೆ ಮಾಡುತ್ತಿದ್ದಾರೆ. ಮನೆ ಖಾಲಿಯಿದ್ದರೂ ಇಲ್ಲ ಎನ್ನುತ್ತಾರೆ. ಲಾಡ್ಜ್ ಗಳಿಗೆ ದುಬಾರಿ ಮೊತ್ತದ ಬಾಡಿಗೆ ಹಣ ನೀಡಿ ಸಾಕಾಗಿದೆ. ಖರ್ಚು ವೆಚ್ಚಕ್ಕೆ ಅತಿಯಾದ ಸಮಸ್ಯೆ ಎದುರಾಗಿದೆ. ಕೊಡಗಿನ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.


ಮಂಗಳ ಮುಖಿಯರಿಗೆ ಬದುಕುವ ಹಕ್ಕಿಲ್ಲವೇ, ಸಮಾಜ ನಮ್ಮನ್ನು ಏಕೆ ಕೆಟ್ಟ ದೃಷ್ಟಿಯಲ್ಲಿ ನೋಡುತ್ತದೆ, ನಾವೇನು ಭಿಕ್ಷೆ ಕೇಳುತ್ತಿಲ್ಲ, ಹಣ ನೀಡುತ್ತೇವೆ ಎಂದರೂ ಮನೆ ಕೊಡುತ್ತಿಲ್ಲ ಎಂದು ತನಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ರಿಹಾನ ಅಳಲನ್ನು ತೋಡಿಕೊಂಡಿದ್ದಾರೆ.


ಜೀವನಕ್ಕಾಗಿ ಭಿಕ್ಷಾಟನೆ ನಡೆಸುತ್ತಿರುವ ರಿಹಾನಾ ಅವರು, ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದು, ಯಾವುದೇ ಸಹಕಾರ ದೊರೆಯದ ಕಾರಣ ದಯಾಮರಣಕ್ಕೆ ಅನುವು ಮಾಡುವಂತೆ ಇಂದು ಅರ್ಜಿ ಸಲ್ಲಿಸಿದ್ದಾರೆ.

Join Whatsapp
Exit mobile version