ಕೊಡಗು: ಧರ್ಮಗುರುಗಳ ಮೇಲೆ ಹಲ್ಲೆ, ಮೂವರ ಬಂಧನ

Prasthutha|

ಮಡಿಕೇರಿ: ಧರ್ಮಗುರುಗಳ ಮೇಲೆ ಹಲ್ಲೆ ನಡೆಸಿರುವ ಘಟನೆಯಲ್ಲಿ ಮೂವರನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಕಬಡಕೇರಿ ಮಸೀದಿಯ ಧರ್ಮಗುರು ಹಾರಿಸ್ ಎಂಬವರು ನಿನ್ನೆ ದಿನ ಸಾಯಂಕಾಲ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ವಿರಾಜಪೇಟೆಯ ಚಿಟ್ಟಡೆಯಿಂದ ಕಬಡಕೇರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಾಕೋಟುಪರಂಬು ಮೈತಾಡಿ ಜಂಕ್ಷನ್ ತಲುಪುತ್ತಿದ್ದಂತೆ ಆಟೋದಲ್ಲಿ ಬಂದ ಮೂವರು ಮುಸಲ್ಮಾನರ ಬಗ್ಗೆ ಕೆಟ್ಟದಾಗಿ ಬೈದು ಹಾರಿಸ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಇದೇ ಮಾರ್ಗವಾಗಿ ಬೇರೆ ವಾಹನಗಳು ಬರುತ್ತಿರುವುದನ್ನು ಗಮನಿಸಿದ ಹಲ್ಲೆಗೋರರು ಸ್ಥಳದಿಂದ ಪರಾರಿಯಾಗಿದ್ದರು. ನಂತರ ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಾದ ಹಾರಿಸ್ ಪೊಲೀಸ್ ದೂರು ನೀಡಿದರು.

ಪ್ರಕರಣವನ್ನು ದಾಖಲಿಸಿಕೊಂಡ ವಿರಾಜಪೇಟೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಕಾಕೋಟುಪರಂಬು ನಿವಾಸಿಗಳಾದ ಸುಬ್ರಮಣಿ, ಸುರೇಶ್ ಮತ್ತು ನವೀನ್ ನನ್ನು ಬಂಧಿಸಿದ್ದಾರೆ.

Join Whatsapp
Exit mobile version