►ನೆಲ್ಯಹುದಿಕೇರಿಯಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಡಿಕೇರಿ: ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯ ಸಂಸ್ಥಾಪನಾ ದಿನದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದರು. ಬೆಳಿಗ್ಗೆ ನೆಲ್ಯಹುದಿಕೇರಿ ಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಿದರು.
ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವುದರ ಮೂಲಕ ಶಿಕ್ಷಣ, ಆರೋಗ್ಯ, ನಿರ್ಗತಿಕ ಹೆಣ್ಣು ಮಕ್ಕಳ ವಿವಾಹ ಕಾರ್ಯ, ಮನೆ ನಿರ್ಮಾಣ, ಅನಾರೋಗ್ಯಕ್ಕೆ ಒಳಗಾದವರಿಗೆ ವೈದ್ಯಕೀಯ ನೆರವು ಸೇರಿದಂತೆ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆ ಮುಂದಾಗಿದೆ ಎಂದು ಸಂಘಟನೆಯ ನೆಲ್ಯಹುದಿಕೇರಿ ಶಾಖಾ ಅಧ್ಯಕ್ಷ ಸಮೀರ್ ತಿಳಿಸಿದರು.
ಸಂಸ್ಥಾಪನಾ ದಿನದ ಅಂಗವಾಗಿ ನೆಲ್ಯಹುದಿಕೇರಿ ಶಾದಿಮಹಲ್ ಸಭಾಂಗಣದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆ ಸಹಕಾರದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಗ್ರಾಮದ ಸುತ್ತಮುತ್ತಲ ಹಲವಾರು ಮಂದಿ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಮಾನವೀಯತೆ ತೋರಿದ್ದಾರೆ.
ಮದರಸ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ನಡೆಸಿದರು. ಜಾತಿ, ಮತ ಭೇದವಿಲ್ಲದೆ ನೂರಾರು ಮಂದಿ ಶಿಬಿರದಲ್ಲಿ ಭಾಗವಹಿಸಿ ನುರಿತ ವೈದ್ಯರ ಗಳಿಂದ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಹಾಗೂ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧಕ ಆಸ್ಪತ್ರೆಯ ಡಾ. ಕರುಂಬಯ್ಯ ರಕ್ತದಾನ ಮಾತನಾಡಿ, ಪ್ರತಿಯೊಂದು ಅಮೂಲ್ಯ ಜೀವಗಳನ್ನು ರಕ್ಷಿಸಲು ರಕ್ತ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ
ಸಹಕರಿಸಬೇಕೆಂದರು.
ಈ ಸಂದರ್ಭ ಡಾ. ಸಂಧ್ಯಾ, ಡಾ. ಅನುಷಾ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯ ಪ್ರಮುಖರಾದ ಮೊಯಿನುದ್ದೀನ್, ಜಂಶೀರ್, ಸಫೀಕ್, ಸಂಶು, ಸಫೀಕ್, ಕೆ. ಎಂ ಬಶೀರ್, ಮುಹಮ್ಮದಲಿ, ಸರ್ಫುದ್ದೀನ್, ಇಸ್ಮಾಯಿಲ್ ಝೈನಿ, ಇಕ್ಬಾಲ್ ಉಸ್ತಾದ್, ಸಲೀಂ, ಇಸ್ಮಾಯಿಲ್ ಸೇರಿದಂತೆ ಮತ್ತಿತರರು ಇದ್ದರು.