Home ಟಾಪ್ ಸುದ್ದಿಗಳು ಕೊಡಗು: ಗೂಡ್ಸ್ ಲಾರಿಯಿಂದ ದ್ರವ ಸೋರಿಕೆ; ಅಸ್ವಸ್ಥಗೊಂಡ 6 ವಿದ್ಯಾರ್ಥಿಗಳು, ಆಸ್ಪತ್ರೆಗೆ ದಾಖಲು

ಕೊಡಗು: ಗೂಡ್ಸ್ ಲಾರಿಯಿಂದ ದ್ರವ ಸೋರಿಕೆ; ಅಸ್ವಸ್ಥಗೊಂಡ 6 ವಿದ್ಯಾರ್ಥಿಗಳು, ಆಸ್ಪತ್ರೆಗೆ ದಾಖಲು

ಮಡಿಕೇರಿ: ಟ್ಯಾಂಕರ್ ವಾಹನವೊಂದದಲ್ಲಿ ದ್ರವ ಸೋರಿಕೆಯಾಗಿರುವುದರಿಂದ ಖಾಸಗಿ ಶಾಲೆಯ ಆರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ರಸ್ತೆಯಲ್ಲಿ ದ್ರವ ಸೋರಿಕೆಯಾದ ಪರಿಣಾಮ ಅದರ ಘಾಟಿನಿಂದಾಗಿ ಸಿದ್ದಾಪುರ ವಿರಾಜಪೇಟೆ ರಸ್ತೆಯಲ್ಲಿರುವ ಸಂತ ಅನ್ನಮ್ಮ ಶಾಲೆಯ ಆರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ವಿದ್ಯಾರ್ಥಿಗಳಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಸಿರಾಟದ ಸಮಸ್ಯೆ ಎದುರಾಗಿರುವ ವಿದ್ಯಾರ್ಥಿಗಳಿಗೆ ಆಕ್ಸಿಜನ್ ನೀಡಲಾಗುತ್ತಿದೆ.

ಸೋರಿಕೆಯಾಗಿರುವುದು ಯಾವುದೇ ಕೆಮಿಕಲ್ ಅಲ್ಲ, ಪೆಪ್ಪರ್ ಸಾಸ್ ಎನ್ನಲಾಗಿದೆ.

Join Whatsapp
Exit mobile version