Home ಟಾಪ್ ಸುದ್ದಿಗಳು ಕೊಡಗು: ಬೆಟ್ಟಗಳು ಕುಸಿಯುವ ಆತಂಕ; ಸುರಕ್ಷಿತ ಪ್ರದೇಶಕ್ಕೆ ಜನರ ಸ್ಥಳಾಂತರ

ಕೊಡಗು: ಬೆಟ್ಟಗಳು ಕುಸಿಯುವ ಆತಂಕ; ಸುರಕ್ಷಿತ ಪ್ರದೇಶಕ್ಕೆ ಜನರ ಸ್ಥಳಾಂತರ

ಕೊಡಗು: ಅಯ್ಯಪ್ಪ ಬೆಟ್ಟ ಮತ್ತು ಮಲೆತಿರಿಕೆ ಬೆಟ್ಟ ಕುಸಿಯುವ ಲಕ್ಷಣಗಳು ಗೋಚರಿಸಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಕೈಗೊಂಡು, ಆ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಿದೆ.

ಕೊಡಗಿನಲ್ಲಿ ಭಾರಿ ಭೂಕುಸಿತ-ಪ್ರವಾಹ ಉಂಟಾಗಿ ಅಪಾರ ನಷ್ಟ, ಸಾವು-ನೋವು ಸಂಭವಿಸಿ ಇನ್ನೇನು ನಾಲ್ಕು ವರ್ಷ ಪೂರ್ಣಗೊಳ್ಳುತ್ತಿದ್ದು, ಇದೀಗ ಭಾರಿ ಮಳೆ, ಭೂಕಂಪಗಳ ಜತೆಗೆ  ಈ ಎರಡು ಬೆಟ್ಟಗಳ ಕುಸಿತದ ಆತಂಕ ಎದುರಾಗಿದೆ.

ಅಯ್ಯಪ್ಪ ಬೆಟ್ಟ ಹಾಗೂ ಮಲೆತಿರಿಕೆ ಬೆಟ್ಟಗಳ 80 ಕುಟುಂಬಗಳ 221 ಮಂದಿಯನ್ನು ಅವರ ವಾಸಸ್ಥಾನಗಳಿಂದ ತೆರವುಗೊಳಿಸಲಾಗಿದ್ದು, ಅವರನ್ನು ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿನ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ, ಆಶ್ರಯ ನೀಡಲಾಗಿದೆ.

Join Whatsapp
Exit mobile version