Home ಟಾಪ್ ಸುದ್ದಿಗಳು ಕೊಡಗು: ಜಿಲ್ಲೆಯ ಕೆಲವೆಡೆ ಧಾರಾಕಾರ ಮಳೆ; ಬಿರುಕು ಬಿಟ್ಟ ದೇವರಕೊಲ್ಲಿ -ಕೊಯನಾಡು ಮುಖ್ಯ ರಸ್ತೆ

ಕೊಡಗು: ಜಿಲ್ಲೆಯ ಕೆಲವೆಡೆ ಧಾರಾಕಾರ ಮಳೆ; ಬಿರುಕು ಬಿಟ್ಟ ದೇವರಕೊಲ್ಲಿ -ಕೊಯನಾಡು ಮುಖ್ಯ ರಸ್ತೆ

ಕೊಡಗು:  ಜಿಲ್ಲೆಯ ಕೆಲವೆಡೆ ರಾತ್ರಿಯಿಡೀ ಧಾರಾಕಾರ ಮಳೆ ಸುರಿದ ಪರಿಣಾಮ ದೇವರಕೊಲ್ಲಿ ಹಾಗೂ ಕೊಯನಾಡು ನಡುವೆ ರಸ್ತೆಯಲ್ಲಿ ದೊಡ್ಡ ಗಾತ್ರದ ಬಿರುಕುಗಳು ಮೂಡಿದ್ದು, ಬೃಹತ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ  ಸಮೀಪದ ಗಡಿಭಾಗವಾದ ಕಲ್ಲುಗುಂಡಿ, ಸಂಪಾಜೆ, ಗೂನಡ್ಕ ಗ್ರಾಮಗಳ ಹಲವು ಭಾಗಗಳು ಜಲಾವೃತಗೊಂಡಿದ್ದು, ಪಯಸ್ವಿನಿ ನದಿ ಮತ್ತಷ್ಟು ತುಂಬಿ ಹರಿಯುತ್ತಿರುವುದರಿಂದ ಸ್ಥಳೀಯರು ಭೀತಿಯ ವಾತಾವರಣದಲ್ಲಿ ದಿನ ದೂಡುವಂತಾಗಿದೆ.

ದಬಡ್ಕ ರಸ್ತೆ ಹಾಗೂ ಕೊಯನಾಡು ಸೇತುವೆಗಳೂ ಹಾನಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿಯ ಸ್ಥಿತಿಯನ್ನು ಇಂದು ಪರಿಶೀಲಿಸಲಿದ್ದಾರೆ ಎಂದು ತಿಳಿದು ಬಂದಿದೆ‌.

Join Whatsapp
Exit mobile version