Home ಟಾಪ್ ಸುದ್ದಿಗಳು ಕೊಡಗು: ಮಹಡಿಯ ಮೇಲಿಂದ ಬಿದ್ದು ನಾಲ್ಕು ವರ್ಷದ ಮಗು ಮೃತ್ಯು

ಕೊಡಗು: ಮಹಡಿಯ ಮೇಲಿಂದ ಬಿದ್ದು ನಾಲ್ಕು ವರ್ಷದ ಮಗು ಮೃತ್ಯು

ವಿರಾಜಪೇಟೆ: ಮನೆಯ ಮಹಡಿ ಮೇಲಿನಿಂದ ಆಯತಪ್ಪಿ ಬಿದ್ದ ಪರಿಣಾಮ ನಾಲ್ಕು ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ವಿರಾಜಪೇಟೆಯಲ್ಲಿ ಸಂಭವಿಸಿದೆ.


ವಿರಾಜಪೇಟೆಯ ಗೌರಿ ಕೆರೆ ನಿವಾಸಿ ಮುನೀರ್ ಹಾಗೂ ಅವರ ಮಗ ತಸ್ಲೀನ್ (4) ಇಬ್ಬರು ಮನೆಯ ಮೇಲಿಂದ ಬಿದ್ದ ಪರಿಣಾಮ ಮುಖ ಹಾಗೂ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದರು. ತಸ್ಲೀನ್ ಸ್ಥಳದಲ್ಲೇ ಮೃತಪಟ್ಟಿದ್ದು, ಮುನೀರ್ ಗಾಯಗಳೊಂದಿಗೆ ವಿರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

Join Whatsapp
Exit mobile version