ಮಡಿಕೇರಿ: ಪುರಾತನ ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ನಾಪೋಕ್ಲು ವ್ಯಾಪ್ತಿಯ ಬಲ್ಲಾಮಾವಟ್ಟಿ ಗ್ರಾಮದ ಕೋಟೇರ ಎಂ.ಸುಬ್ಬಯ್ಯರವರ ಕುಟುಂಬಸ್ಥರಿಗೆ ಸೇರಿದ ದೇವಸ್ಥಾನದಲ್ಲಿದ್ದ ಪುರಾತನ ಕಾಲದ ವಿಗ್ರಹ ಕಳ್ಳತನವಾಗಿರುವ ಬಗ್ಗೆ ಸಬ್ಬಯ್ಯನವರು ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಅಧೀಕ್ಷಕರು ಹಾಗೂ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಸೂಚನೆಯಂತೆ ಮಡಿಕೇರಿ ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ನಾಪೋಕ್ಲು ಪೊಲೀಸ್ ಪಿ.ಎಸ್.ಐ ರವರ ಮುಂದಾಳತ್ವದಲ್ಲಿ ತಂಡ ರಚಿಸಿದ ನಾಪೋಕ್ಲು ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದು, ಕೇರಳ ಮೂಲದ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕಳವಾಗಿದ್ದ ಸುಮಾರು 1,50,000 ಮೌಲ್ಯವುಳ್ಳ ಪುರಾತನ ಕಾಲದ ಪಂಚಲೋಹದಂತಿರುವ ಚಾಮುಂಡೇಶ್ವರಿ ವಿಗ್ರಹ, ಕೃತ್ಯಕ್ಕೆ ಬಳಸಿದ ಮೆಟಲ್ ಡಿಟೆಕ್ಟರ್, ಕೆಎಲ್-11-ಎಕ್ಸ್-5006 ಬಿಳಿ ಬಣ್ಣದ ಕ್ರೆಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಅಧೀಕ್ಷಕರಾದ ಎಂ.ಎ ಅಯ್ಯಪ್ಪ ಐಪಿಎಸ್ ಹಾಗೂ ಮಡಿಕೇರಿ, ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗಜೇಂದ್ರ ಪ್ರಸಾದ್ ರವರ ಮಾರ್ಗದರ್ಶದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮತ್ತು ನಾಪೋಕ್ಲು ಪೊಲೀಸ್ ಠಾಣಾ ಉಪನಿರೀಕ್ಷಕ ಎಂ.ಕೆ. ಸದಾಶಿವ, ಹಾಗೂ ನಾಮತ್ತು ಪೊಲೀಸ್ ಠಾಣಾ ಎಎಸ್‌ಐ ಕುಶಾಲಪ್ಪ, ಸಿಬ್ಬಂದಿಗಳಾದ ರವಿಕುಮಾರ್, ಸಾಜನ್, ಲವಕುಮಾರ್, ನವೀನ್, ಮಧುಸೂಧನ್, ಮಾಚಯ್ಯ, ಶರತ್ ಕುಮಾರ್, ಗಿರೀಶ್, ಗಣೇಶ್, ರಾಜೇಶ್, ಪಂಚಲಿಂಗ, ಮಡಿಕೇರಿ ಗ್ರಾಮಾಂತರ ವೃತ್ತದ ಸಿಬ್ಬಂದಿಗಳಾದ ಕಾಳಿಯಪ್ಪ, ಪ್ರೇಮ್ ಕುಮಾರ್, ಶ್ರೀಮತಿ ಶೋಭ ಮತ್ತು ಸಿಡಿಆರ್ ಸೆಟ್ ನ ರಾಜೇಶ್, ಗಿರೀಶ್ ಮತ್ತು ಪ್ರವೀಣ್ ಚಾಲಕರಾದ ಷರೀಪ, ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.