ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಬಾಣಾವರ ವ್ಯಾಪ್ತಿಯ ದೊಡ್ಡೊಬ್ಬರು ಗ್ರಾಮದ ನಿವಾಸಿಯೊಬ್ಬರ ಜಾಗದಲ್ಲಿದ್ದ ಬೀಟೆ ಮರವನ್ನು ಅಕ್ರಮವಾಗಿ ಕಡಿತಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಅಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಬಸವಳ್ಳಿ ನಿವಾಸಿ ಎ.ಜಿ ಅಜಿತ್ ಹಾಗೂ ಕಲ್ಕಂದೂರು ನಿವಾಸಿ ಕೆ.ಎಂ ನಿಕಿಲ್ ಬಂಧಿತರಾಗಿದ್ದು, ಮತ್ತೋರ್ವ ಆರೋಪಿ ಎ.ಟಿ ಸೋಮಶೇಖರ್ ತಲೆ ಮರೆಸಿಕೊಂಡಿದ್ದಾನೆ.
ಬೀಟೆ ಮರದ ಐದು ನಾಟಾಗಳನ್ನು ಹಾಗೂ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಆರ್.ಎಫ್.ಓ ಚೇತನ್ ಹೆಚ್.ಪಿ ಮತ್ತು ಡಿ.ವೈ.ಆರ್.ಎಫ್.ಓ ರಾಕೇಶ್ ಹೆಚ್.ಎಂ ಅರಣ್ಯ ರಕ್ಷಕರಾದ ಸದಾನಂದ ಹಿಪ್ಪರಗಿ, ಪ್ರಸಾದ್ ಕುಮಾರ್, ಪ್ರಕಾಶ್, ಅರಣ್ಯ ವೀಕ್ಷಕರಾದ ಆಂಥೋನಿ ಹಾಗೂ ವಿಕಾಸ್ ಪಾಲ್ಗೊಂಡಿದ್ದರು.