Home ಟಾಪ್ ಸುದ್ದಿಗಳು ಕೊಡಗು ಶಸ್ತಾಸ್ತ್ರ ತರಬೇತಿ: ಬಜರಂಗದಳದವರಿಗೆ ನೋಟಿಸ್ ನೀಡಿದ್ದ ಇನ್ಸ್’ಪೆಕ್ಟರ್ ತಲೆದಂಡ ?

ಕೊಡಗು ಶಸ್ತಾಸ್ತ್ರ ತರಬೇತಿ: ಬಜರಂಗದಳದವರಿಗೆ ನೋಟಿಸ್ ನೀಡಿದ್ದ ಇನ್ಸ್’ಪೆಕ್ಟರ್ ತಲೆದಂಡ ?

ಮಡಿಕೇರಿ : ಕರ್ನಾಟಕ ಸರ್ಕಾರದ ಗೃಹ ಇಲಾಖೆ ನಿನ್ನೆ 37 ಮಂದಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಈ ವರ್ಗಾವಣೆ ಪಟ್ಟಿಯಲ್ಲಿ ಕೊಡಗಿನ ಗೋಣಿಕೊಪ್ಪ ಪೊಲೀಸ್ ಸರ್ಕಲ್ ಇನ್ಸ್’ಪೆಕ್ಟರ್ ಜಯರಾಮ್ ಎಸ್ ಎಂ ಅವರ ಹೇಸರೂ ಸೇರಿದೆ. ಕೊಡಗಿನ ಪೊನ್ನಂಪೇಟೆಯಲ್ಲಿ ಬಜರಂಗದಳ ಹಮ್ಮಿಕೊಂಡಿದ್ದ ಆಯುಧ ತರಬೇತಿ ಶಿಬಿರ ನಡೆಸಿದ ಸಂಘಟಕರು ಹಾಗೂ ಶಾಲೆಯ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದೇ ಜಯರಾಮ್ ಅವರ ವರ್ಗಾವಣೆಗೆ ಕಾರಣವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಕೊಡಗಿನ ಆಯುಧ ತರಬೇತಿ ಶಿಬಿರದ ಕುರಿತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ವೇಳೆ ಅಲ್ಲಿ ಹಾಜರಿದ್ದ ಸರ್ಕಲ್ ಇನ್ಸ್’ಪೆಕ್ಟರ್ ಜಯರಾಮ್ ಸಂಘಟಕರಿಗೆ ಹಾಗೂ ಶಾಲಾಡಳಿತ ಮಂಡಳಿಗೆ ನಾವು ನೋಟೀಸ್ ನೀಡಿದ್ದು, ನಾಲ್ಕು ಗಂಟೆಗಳ ಒಳಗಾಗಿ ಉತ್ತರಿಸುವಂತೆ ಕೇಳಲಾಗಿದೆ ಎಂದು ದೂರು ನೀಡಲು ಹೋದವರಲ್ಲಿ ಮೌಖಿಕವಾಗಿ ಹೇಳಿದ್ದರು ಎನ್ನಲಾಗಿದೆ. ಆದರೆ ಆ ಬಳಿಕ ಕೆಲವೇ ಗಂಟೆಗಳ ಒಳಗಾಗಿ ಜಯರಾಮ್ ಅವರ ವರ್ಗಾವಣೆ ಆದೇಶ ಹೊರಬಿದ್ದಿದೆ.

ಇನ್ನು ಈ ವರ್ಗಾವಣೆ ಕ್ರಮ ನೋಟಿಸ್ ನೀಡಿದ್ದಕ್ಕೆ ಎಂದು ಸಾರ್ವಜನಿಕರು ಆರೋಪಿಸಲು ಕಾರಣಗಳಿವೆ. ವರ್ಗಾವಣೆ ಪತ್ರದಲ್ಲಿ ಜಯರಾಮ್ ಅವರ ಹೆಸರು ಕೊನೆಯಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಇದು ಅಂತಿಮ ಹಂತದಲ್ಲಿ ಸೇರಿಸಲ್ಪಟ್ಟ ಹೆಸರು ಎಂದೇ ಸಾರ್ವಜನಿಕರು ಬಲವಾಗಿ ಆರೋಪಿಸುತ್ತಿದ್ದಾರೆ.

Join Whatsapp
Exit mobile version