Home ಟಾಪ್ ಸುದ್ದಿಗಳು ಕೊಡಗು: ಹಾಡಹಗಲೇ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಕೊಡಗು: ಹಾಡಹಗಲೇ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಗೋಣಿಕೊಪ್ಪ: 2021ರ ಅಗಸ್ಟ್ ನಲ್ಲಿ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಹಾಡುಹಗಲೇ ಹಾತ್ತೂರು ಗ್ರಾಮದ ಕೆ.ಎಸ್.ಮಾಚಯ್ಯರವರ ಮನೆಯಲ್ಲಿ ಹಾಡುಹಗಲೇ ಕಳ್ಳತನ ಮಾಡಿದ್ದ  ಆರೋಪಿತರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

 ಅತ್ತೂರು  ಗ್ರಾಮದ ನಿವಾಸಿ ಕೆ.ಎಸ್.ಮಾಚಯ್ಯ ಆಗಸ್ಟ್ 5 ರಂದು ಬೆಳಿಗ್ಗೆ 6 ಗಂಟೆಗೆ ಮನೆಗೆ ಬೀಗಹಾಕಿಕೊಂಡು ಅಮ್ಮತ್ತಿಯಲ್ಲಿರುವ ತಮ್ಮ ಕಾಫಿ ತೋಟಕ್ಕೆ ಹೋಗಿದ್ದು, ಸಂಜೆ ಮನೆಗೆ ವಾಪಾಸ್ಸು ಬಂದು ನೋಡುವಾಗ್ಗೆ ಮನೆಯ ಹೆಂಚನ್ನು ತೆಗೆದು ಕಳ್ಳರು ಒಳನುಗ್ಗಿ ಗಾಡ್ರೇಜ್ ನಲ್ಲಿಟ್ಟಿದ್ದ 50 ಸಾವಿರ ನಗದು ಹಣ ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬAಧ ದೂರು ದಾಖಲಿಸಿಕೊಂಡು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ  ಆರೋಪಿಗಳಿಗೆ ಪತ್ತೆಗೆ ಬಲೆ ಬೀಸಿದ್ದರು.

  ಸದ್ಯ ಆರೋಪಿಗಳಾದ ಆನಂದ್, ಶಿವಕುಮಾರ್ ಗೋಪಾಲ ಎಂಬ ಮೂವರನ್ನು  ಪತ್ತೆ ಹಚ್ಚಿ ಕಳುವಾದ 3 ಚಿನ್ನದ ನಾಣ್ಯಗಳು, ಒಂದು ಚಿನ್ನದ ಸರ, 6 ಬೆಳ್ಳಿಯ ನಾಣ್ಯಗಳು ಸೇರಿ ಒಟ್ಟು 16ಗ್ರಾಂ ಚಿನ್ನಾಭರಣ, 30 ಗ್ರಾಂ ಬೆಳ್ಳಿ ಹಾಗೂ ರೂ.1600/- ರೂ ನಗದು ಹಣ ಸೇರಿ ಒಟ್ಟು ರೂ.76600/- ಮೌಲ್ಯದ ಸ್ವತ್ತುಗಳನ್ನು  ವಶಪಡಿಸಿಕೊಂಡಿದ್ದಾರೆ.

ವಿರಾಜಪೇಟೆ ಉಪವಿಭಾಗ ಡಿವೈ.ಎಸ್.ಪಿ ಸಿ.ಟಿ.ಜಯಕುಮಾರ್ ರವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎಸ್.ಎನ್.ಜಯರಾಮ್, ಎಎಸ್ಐ ಸುಬ್ರಮಣಿ, ಎಎಸ್ಐ ದೇವರಾಜು ಹಾಗೂ ಸಿಬ್ಬಂದಿಯವರಾದ ಹೆಚ್.ಕೆ.ಕೃಷ್ಣ, ಪಿ.ಎ.ಮಹಮದ್ ಅಲಿ, ಎಂ.ಡಿ.ಮನು, ಅಬ್ದುಲ್ ಮಜೀದ್, ಹರೀಶ, ಹೇಮಲತಾ ರೈ  ಮತ್ತು ಚಾಲಕರಾದ ಬಷೀರ್ ಪ್ರಕರಣವನ್ನು ಭೇದಿಸಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

Join Whatsapp
Exit mobile version