ಮಂಗಳೂರು: ‘ಪ್ರಸ್ತುತ’ ಪಾಕ್ಷಿಕದ ವತಿಯಿಂದ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ರಾಜ್ಯಮಟ್ಟದ ‘ಕೆ.ಎಂ.ಶರೀಫ್ ಪ್ರಶಸ್ತಿ-2021’ಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಾಮಾಜಿಕ ಹೋರಾಟ, ಪತ್ರಿಕೋದ್ಯಮ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಯು ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ಮತ್ತು ನಗದನ್ನು ಒಳಗೊಂಡಿರುತ್ತದೆ.
ಪ್ರಸ್ತುತ ಪಾಕ್ಷಿಕದ ಪ್ರಥಮ ಪ್ರಧಾನ ಸಂಪಾದಕರಾಗಿದ್ದ ಕೆ.ಎಂ.ಶರೀಫ್ ಹೋರಾಟ, ಪತ್ರಿಕೋದ್ಯಮ, ಸಮಾಜ ಸೇವೆ… ಹೀಗೆ ಏಕಕಾಲದಲ್ಲಿ ಹಲವು ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದಾರೆ.
ಸ್ವತಂತ್ರ ಭಾರತದ ಅಪೂರ್ವ ಸಾಮಾಜಿಕ ಚಳುವಳಿಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಕೆ.ಎಂ.ಶರೀಫ್ (01.09.1964 – 22.12.2020) ಸಂಘಟನೆಯ ಚಾಲಕ ಶಕ್ತಿಯಾಗಿ, ದೇಶದ ಉದ್ದಗಲಕ್ಕೆ ಸಂಚರಿಸಿ ದಮನಿತ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ಶಕ್ತಿಮೀರಿ ಶ್ರಮಿಸಿದ್ದರು.
ಸಾಮಾಜಿಕ ಅನಿಷ್ಟವಾಗಿದ್ದ ವರದಕ್ಷಿಣೆಯ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿ ಯುವಕರಲ್ಲಿ ಜಾಗೃತಿ ಮೂಡಿಸುವಲ್ಲಿ ಸಫಲರಾಗಿದ್ದರು. ಸಮಕಾಲೀನ ವಿಚಾರಗಳಿಗೆ ಸ್ಪಂದಿಸುತ್ತಿದ್ದ ಅವರು ತಮ್ಮ ಬರಹಗಳ ಮೂಲಕ ಸಮಾಜದ ಹುಳುಕುಗಳನ್ನು ತೆರೆದಿಡುತ್ತಿದ್ದರು. ಕರ್ನಾಟಕದ ಭಾವೈಕ್ಯ ಕೇಂದ್ರವಾದ ಬಾಬಾ ಬುಡನ್ ಗಿರಿ ರಕ್ಷಣಾ ಹೋರಾಟದಲ್ಲೂ ಅವರು ಪಾಲ್ಗೊಂಡಿದ್ದರು. ಅವರ ಹೋರಾಟ ಮತ್ತು ಜೀವನದ ಆದರ್ಶವನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಸ್ತುತ ಪಾಕ್ಷಿಕದ ವತಿಯಿಂದ ಕೆ.ಎಂ. ಪ್ರಶಸ್ತಿ ಪ್ರದಾನ ಯೋಜನೆಯನ್ನುರೂಪಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಡಿಸೆಂಬರ್ 30ಕೊನೆಯ ದಿನವಾಗಿರುತ್ತದೆ.
ಮಾನದಂಡಗಳು:
- ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅರ್ಜಿ ಸಲ್ಲಿಸುವವರು ಕನಿಷ್ಠ 8-10 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.
- ಪತ್ರಿಕೋದ್ಯಮದಲ್ಲಿ ಅರ್ಜಿ ಸಲ್ಲಿಸುವವರು ಕನಿಷ್ಠ 10 ವರ್ಷ ಈ ಕ್ಷೇತ್ರದಲ್ಲಿ ಕೆಲಸ ಮಾಡಿರಬೇಕು. ತಾವು ಮಾಡಿರುವ ಸಾಧನೆಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ, ಚಿತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
- ಕಳೆದ 10 ವರ್ಷಗಳಿಂದ ಹೋರಾಟ ರಂಗದಲ್ಲಿರುವವರು ತಾವು ಮಾಡಿದ ಹೋರಾಟಗಳ ವಿವರಗಳನ್ನು ಸಲ್ಲಿಸಬೇಕು
- ಇದು ವೈಯಕ್ತಿಕವಾಗಿ ನೀಡುವ ಪ್ರಶಸ್ತಿಯಾಗಿರುವುದರಿಂದ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸುವಂತಿಲ್ಲ.
- ಇತರರು ಕೂಡ ಸಾಧಕರ ಹೆಸರನ್ನು ಸೂಚಿಸಬಹುದು ಮತ್ತು ಅವರ ಸಾಧನೆಗಳ ವಿವರಗಳನ್ನು ಕಳುಹಿಸಬಹುದು.
ಹೆಚ್ಚಿನ ಮಾಹಿತಿಗೆ 8296499072 ವಾಟ್ಸಪ್ ಅಥವಾ ಕರೆ ಮಾಡಬಹುದು.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಮೀಡಿಯಾ ಹೌಸ್, 3ನೇ ಮಹಡಿ, ಅಲ್ ರಹಬಾ ಫ್ಲಾಝಾ, ನೆಲ್ಲಿಕಾಯಿ ರಸ್ತೆ, ಮಂಗಳೂರು -575001
ಈಮೇಲ್: kmshareefaward21@gmail.com