ಶ್ರೀಲಂಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೀಡಿದ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಮತ್ತೋರ್ವ ಆಟಗಾರ ಕೆಎಲ್ ರಾಹುಲ್ ಇನ್ಸ್ಟಾಗ್ರಾಂ ಸ್ಟೋರಿ ಅಭಿಮಾನಿಗಳ ಗಮನ ಸೆಳೆದಿದೆ.
ಸೂರ್ಯಕುಮಾರ್ ಯಾದವ್ ಆಬ್ಬರದ ಆಟಕ್ಕೆ ಕೆಎಲ್ ರಾಹುಲ್ ತುಳುವಿನಲ್ಲಿಯೇ ಶ್ಲಾಘಿಸಿ ಮೆಚ್ಚುಗೆ ಸೂಚಿಸಿ ಭಾರೀ ಎಡ್ಡೆ ಗೊಬ್ಬಿಯ(ತುಂಬಾ ಚೆನ್ನಾಗಿ ಆಟವಾಡಿದ್ದೀಯಾ) ಎಂದು ಹೇಳಿರುವ ರಾಹುಲ್ ಸ್ಟೋರಿಯನ್ನು ಹಂಚಿಕೊಂಡಿರುವ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಕೂಡ ತುಳುವಿನಲ್ಲಿ ನೀಡಿರುವ ಪ್ರತಿಕ್ರಿಯೆ ವ್ಯಾಪಕ ವೈರಲ್ ಆಗಿದೆ.
ಕೆಎಲ್ ರಾಹುಲ್ ಸ್ಟೋರಿಯನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಮಂಗಳೂರು ಮೂಲದ ದೇವಿಶಾ, “ಚೂರು ತುಳು ಕಲ್ಪಾವೊಡು ಆರೆಗ್ ನನ” (ಇನ್ನು ಅವರಿಗೆ ಸ್ವಲ್ಪ ತುಳು ಕಲಿಸಬೇಕು) ಎಂದು ಬರೆದುಕೊಂಡಿದ್ದಾರೆ.