Home ಟಾಪ್ ಸುದ್ದಿಗಳು ಕೆಕೆಆರ್ ಟಿಸಿ ಭದ್ರತಾ ಇನ್ ಸ್ಪೆಕ್ಟರ್ ಹುಸೇನಪ್ಪ ಭೀಕರ ಹತ್ಯೆ

ಕೆಕೆಆರ್ ಟಿಸಿ ಭದ್ರತಾ ಇನ್ ಸ್ಪೆಕ್ಟರ್ ಹುಸೇನಪ್ಪ ಭೀಕರ ಹತ್ಯೆ

ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ಭದ್ರತಾ ಇನ್ ಸ್ಪೆಕ್ಟರ್ ಹುಸೇನಪ್ಪ (54) ಅವರನ್ನು ಭಾನುವಾರ ರಾತ್ರಿ ಜೈಲಿನ ಬಳಿ ಭೀಕರವಾಗಿ ಕೊಲೆ ಮಾಡಲಾಗಿದೆ.


ಹುಸೇನಪ್ಪ ರಾತ್ರಿ 8.30ರ ಸುಮಾರಿಗೆ ಬೀದರ್ ಗೆ ಹೊರಡಲು ಬ್ಯಾಗ್ ತೆಗೆದುಕೊಂಡು ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದಾಗ ಅಪರಿಚಿತರು ಬೈಕ್ ನಲ್ಲಿ ಬಂದು ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಕೆಕೆಆರ್ ಟಿಸಿ ಮೂಲಗಳು ತಿಳಿಸಿವೆ.


ಬೀದರ್ ನಲ್ಲಿ ನಡೆಯುತ್ತಿರುವ ಚಾಲಕರ ನೇಮಕಾತಿ ಪರೀಕ್ಷೆಗೆ ಅವರನ್ನು ನಿಯೋಜನೆ ಮಾಡಲಾಗಿತ್ತು. ಮನೆಯಿಂದ ಕೂಗಳತೆ ದೂರದಲ್ಲಿ ಅವರ ಮೇಲೆ ದಾಳಿ ನಡೆದಿದೆ.

Join Whatsapp
Exit mobile version