ಗಂಗಾವತಿ: ಇಲ್ಲಿನ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಇಂದು (ಶನಿವಾರ) ಬೆಳಿಗ್ಗೆ ಭಕ್ತರು ಕೋವಿಡ್ ನಿಯಮ ಉಲ್ಲಂಘಿಸಿ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ದೇವರ ದರ್ಶನಕ್ಕೆ ಮುಗಿಬಿದ್ದು ಪೂಜೆ ಸಲ್ಲಿಸಿದ್ದಾರೆ.
ಕಳೆದ ಮಾರ್ಚ್ 23 ರಿಂದ ಅಂಜನಾದ್ರಿಯನ್ನು ಭಕ್ತರ ಪ್ರವೇಶಕ್ಕೆ ನಿಷೇಧಿಸಲಾಗಿತ್ತು .ಇಂದು ಗಂಗಾವತಿ ತಾಲ್ಲೂಕು ಮತ್ತು ಬೇರೆ ಜಿಲ್ಲೆಗಳಿಂದ ಭಕ್ತರು ಅಂಜನಾದ್ರಿಗೆ ಆಗಮಿಸಿದ್ದು, ನೂರಾರು ವಾಹನಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಮಾಜಿಕ ಅಂತರವಿಲ್ಲದೆ ಅಂಜನಾದ್ರಿ ಬೆಟ್ಟವನ್ನು ಹತ್ತಿದ್ದಾರೆ.
ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಕೆಳಗಿನಿಂದ ಮೇಲಿನ ದೇಗುಲದವರೆಗೂ ಭಕ್ತರು ಸಾಮಾಜಿಕ ಅಂತರವಿಲ್ಲದೆ ಕ್ಯೂ ನಿಂತಿದ್ದರು. ದೇವಸ್ಥಾನದವರು ಕೋವಿಡ್ ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಧ್ವನಿವರ್ಧಕದ ಮೂಲಕ ನೀಡುತ್ತಿದ್ದ ಪ್ರಕಟಣೆಯನ್ನು ಭಕ್ತರು ಕ್ಯಾರೇ ಅನ್ನಲಿಲ್ಲ.