ಜೈಪುರ: ರಜಪೂತ ಕರ್ಣಿ ಸೇನೆಯ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯಗೈದ ಘಟನೆಗೆ ಸಂಬಂಧಿಸಿ ಕರ್ಣಿ ಸೇನೆ ಹಾಗೂ ಇತರ ಸಂಘಟನೆಗಳು ಇಂದು ರಾಜಸ್ಥಾನ ಬಂದ್ ಗೆ ಕರೆ ನೀಡಿದೆ.
ನಿನ್ನೆ ಮಧ್ಯಾಹ್ನ ಸುಖದೇವ್ ಸಿಂಗ್ ಗೊಗಮೆಡಿ ಮನೆಯಲ್ಲಿದ್ದ ಸಂದರ್ಭ ಇಬ್ಬರು ಅಪರಿಚಿತರು ಮಾತನಾಡುವ ಉದ್ದೇಶದಲ್ಲಿ ಮನೆಯೊಳಗೆ ಬಂದಿದ್ದರು. ಬಂದವರೇ ಎಕಾಏಕಿ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದರು. ಸುಖದೇವ್ ಸಿಂಗ್ ಅವರನ್ನು ಹತ್ಯೆ ಮಾಡಿದ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಜೈಪುರ ಪೊಲೀಸರು ಹಂತಕರ ಪತ್ತೆಗೆ ಬಲೆ ಬಿಸಿದ್ದಾರೆ. ಇಂದು ಕರ್ಣಿ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಗೊಗಮೆಡಿ ಹತ್ಯೆಯನ್ನು ಖಂಡಿಸಿ ರಾಜಸ್ಥಾನ ಬಂದ್ ಗೆ ಕರೆ ನೀಡಿದೆ.