Home ಟಾಪ್ ಸುದ್ದಿಗಳು ಬಿಹಾರದಲ್ಲಿ ಅಪ್ರಾಪ್ತ ಮುಸ್ಲಿಮ್ ಬಾಲಕಿಯ ಅತ್ಯಾಚಾರ, ಭೀಕರ ಹತ್ಯೆ: ಮರು ಶವ ಪರೀಕ್ಷೆಗೆ ಜಿಲ್ಲಾಡಳಿತ ಆದೇಶ

ಬಿಹಾರದಲ್ಲಿ ಅಪ್ರಾಪ್ತ ಮುಸ್ಲಿಮ್ ಬಾಲಕಿಯ ಅತ್ಯಾಚಾರ, ಭೀಕರ ಹತ್ಯೆ: ಮರು ಶವ ಪರೀಕ್ಷೆಗೆ ಜಿಲ್ಲಾಡಳಿತ ಆದೇಶ

ಕಟಿಹಾರ್: ಅಪ್ರಾಪ್ತ ಮುಸ್ಲಿಮ್ ಬಾಲಕಿಯನ್ನು ಅಪಹರಿಸಿ ಭೀಕರವಾಗಿ ಹತ್ಯೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಭಾರೀ ಪ್ರತಿಭಟನೆಯ ಬಳಿಕ ಮರು ಶವ ಪರೀಕ್ಷೆಗೆ ಜಿಲ್ಲಾಡಳಿತ ಆದೇಶ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಬಿಹಾರದ ಕಟಿಹಾರ ಜಿಲ್ಲೆಯ ತನ್ನ ಸ್ನೇಹಿತೆಯ ಮನೆಗೆ ತೆರಳಿದ್ದ ವೇಳೆ 16ರ ಹರೆಯದ ಮುಸ್ಲಿಮ್ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಬಳಿಕ ಹತ್ಯೆ ನಡೆಸಲಾಗಿತ್ತು.

ಘಟನೆಯ ಸಂಬಂಧಿಸಿದಂತೆ ಸ್ಥಳೀಯ ಅಜಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆಕೆಯ ಮೃತದೇಹವು ನೆರೆಹೊರೆಯ ಅನ್ಯ ಧರ್ಮೀಯರ ಮನೆಯಲ್ಲಿ ಭಯಾನಕ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ಕಾಲು ಮುರಿದುಹೋಗಿದ್ದು, ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳಿತ್ತು ಎಂದು ಆಕೆಯ ಸೋದರಸಂಬಂಧಿ ವಝಲ್ ಕಮರ್ ತಿಳಿಸಿದ್ದಾರೆ.

ಈ ಮಧ್ಯೆ ಅಪ್ರಾಪ್ತ ಬಾಲಕಿಯನ್ನು ಅದೇ ಗ್ರಾಮದ ಮುಖ್ಯಸ್ಥನ ಸಹೋದರ ಕುಸುಮ್ ಲಾಲ್ ವಿಶ್ವಾಸ್ ಎಂಬಾತ ಅಪಹರಿಸಿ, ಅತ್ಯಾಚಾರ ನಡೆಸಿ ಹತ್ಯೆ ನಡೆಸಿದ್ದಾನೆ ಎಂದು ಕಮರ್ ದೂರಿದ್ದಾರೆ. ಆಕೆಯ ಶವ ರೇಖಾ ದೇವಿ ಎಂಬಾಕೆಯ ಮನೆಯಲ್ಲಿ ಪತ್ತೆಯಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 302, 201, 120 ಬಿ ಮತ್ತು 24ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ರೇಖಾ ದೇವಿ ಮತ್ತು ವಿಶ್ವಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

https://twitter.com/Asad_Ashraf88/status/1530072470820007936
Join Whatsapp
Exit mobile version