Home ಟಾಪ್ ಸುದ್ದಿಗಳು ಊಟಕ್ಕೆ ಕರೆದಿಲ್ಲವೆಂದು ಗೆಳೆಯನನ್ನೇ ಕೊಂದ ಭೂಪ!

ಊಟಕ್ಕೆ ಕರೆದಿಲ್ಲವೆಂದು ಗೆಳೆಯನನ್ನೇ ಕೊಂದ ಭೂಪ!

ಹಾಸನ: ಊಟಕ್ಕೆ ಕರೆಯಲಿಲ್ಲಾ ಎನ್ನುವ ಕಾರಣಕ್ಕೆ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಪುರ್ಲೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಶರತ್ (28) ಕೊಲೆಯಾದ ಯುವಕ. ನಟರಾಜ್‍ ಬಂಧಿತ ಆರೋಪಿಯಾಗಿದ್ದಾನೆ. ಕುರಿ ಊಟಕ್ಕೆ ಕರೆದಿಲ್ಲ ಎಂದು ನಡೆದ ಜಗಳಲ್ಲಿ ಶರತ್ ಮೇಲೆ ಹಲ್ಲೆ ನಡೆಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶರತ್ ಸಾವನ್ನಪಿದ್ದಾನೆ.

ಜನವರಿ 16 ರಂದು ಗ್ರಾಮದ ಗಿರೀಶ್ ಸಖರಾಯಪಟ್ಟಣದಲ್ಲಿ ದೇವರ ಹರಕೆ ಕೊಟ್ಟು ಊಟ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಶರತ್ ಮತ್ತು ಮನೆಯವರು ತೆರಳಿದ್ದರು. ಈ ಕಾರ್ಯಕ್ರಮಕ್ಕೆ ಗ್ರಾಮದ ನಟರಾಜ್‍ನನ್ನು ಆಹ್ವಾನಿಸಿರಲಿಲ್ಲ. ನಮ್ಮನ್ನು ಯಾಕೆ ಊಟಕ್ಕೆ ಕರೆದಿಲ್ಲ ಎಂದು ನಟರಾಜ್ ತನ್ನ ಗೆಳೆಯ ಶರತ್ ಜೊತೆ ಜಗಳ ಮಾಡಿದ್ದಾನೆ.

ಈ ವಿಚಾರವಾಗಿ ಕುಪಿತಗೊಂಡು ಭಾನುವಾರ ರಾತ್ರಿ ಮನೆಗೆ ನುಗ್ಗಿದ ನಟರಾಜ್ ಮತ್ತು ಸ್ನೇಹಿತರು ಮಾರಕಾಸ್ತ್ರಗಳಿಂದ ಶರತ್ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಶರತ್‍ನನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಶರತ್ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version