Home ಟಾಪ್ ಸುದ್ದಿಗಳು ಕೊರೊನ ಹರಡುವಿಕೆ ಭೀತಿ | ಡೆನ್ಮಾರ್ಕ್ ನಲ್ಲಿ 1.70 ಕೋಟಿ ಮಿಂಕ್ ಗಳ ಕೊಲ್ಲಲು...

ಕೊರೊನ ಹರಡುವಿಕೆ ಭೀತಿ | ಡೆನ್ಮಾರ್ಕ್ ನಲ್ಲಿ 1.70 ಕೋಟಿ ಮಿಂಕ್ ಗಳ ಕೊಲ್ಲಲು ನಿರ್ಧಾರ

ಕೋಪನ್ ಹೇಗನ್ : ಪ್ರಾಣಿಗಳಲ್ಲಿ ಕೊರೊನ ವೈರಸ್ ಸೋಂಕು ಹರಡುವಿಕೆ ಪತ್ತೆಯಾಗಿರುವುದರಿಂದ ಡೆನ್ಮಾರ್ಕ್ ನಲ್ಲಿ 1 ಕೋಟಿ 70 ಲಕ್ಷ ಮಿಂಕ್ ಗಳನ್ನು (ಮುಂಗುಸಿಯಂತಹ ಮಾಂಸಾಹಾರಿ ಪ್ರಾಣಿ) ಕೊಲ್ಲಲು ನಿರ್ಧರಿಸಲಾಗಿದೆ. ಮಿಂಕ್ ಗಳಲ್ಲಿನ ಕೊರೊನ ವೈರಸ್ ಮನುಷ್ಯರಿಗೆ ಹರಡುತ್ತಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಾಣಿಗಳಿಂದ ಮನುಷ್ಯರಿಗೆ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಎಲ್ಲಾ ಮಿಂಕ್ ಗಳನ್ನು ಹತ್ಯೆ ಮಾಡುವ ಯೋಜನೆಯಿದೆ ಎಂದು ಡೆನ್ಮಾರ್ಕ್ ಅಧ್ಯಕ್ಷ ಮೆಟ್ಟೆ ಫ್ರೆಡೆರಿಕ್ಸೆನ್ ಹೇಳಿದ್ದಾರೆ.

ಡೆನ್ಮಾರ್ಕ್ ಯುರೋಪ್ ನಲ್ಲೇ ಅತಿಹೆಚ್ಚು ಮಿಂಕ್ ತುಪ್ಪಳ ಉತ್ಪಾದಿಸುವ ದೇಶ. ಮಿಂಕ್ ಫಾರಂಗಳಲ್ಲಿ ಕೆಲವು ಮಿಂಕ್ ಗಳಿಗೆ ಕೊರೊನ ವೈರಸ್ ಹರಡಿರುವುದು ಮತ್ತು ಅದು ಮನುಷ್ಯರಿಗೂ ಹರಡಿರುವುದು ಆತಂಕಕ್ಕೆ ಕಾರಣವಾಗಿದೆ.

Join Whatsapp
Exit mobile version