Home ಟಾಪ್ ಸುದ್ದಿಗಳು ಅಪ್ರಾಪ್ತ ಬಾಲಕಿಯ ಅಪಹರಣ; ಆರೋಪಿಯ ಸುಳಿವು ನೀಡುವವರಿಗೆ ಬಹುಮಾನ

ಅಪ್ರಾಪ್ತ ಬಾಲಕಿಯ ಅಪಹರಣ; ಆರೋಪಿಯ ಸುಳಿವು ನೀಡುವವರಿಗೆ ಬಹುಮಾನ

ಶಿವಮೊಗ್ಗ: ಹದಿನಾರು ವರ್ಷದ ಬಾಲಕಿಯನ್ನು ಅಪಹರಿಸಿಕೊಂಡು ಪರಾರಿಯಾಗಿರುವ ಆರೋಪಿಯ ಸುಳಿವು ನೀಡುವವರಿಗೆ ಶಿವಮೊಗ್ಗ ಪೊಲೀಸರು 50 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

ಆರೋಪಿ ಲಿಂಗರಾಜು ಅಲಿಯಾಸ್ ವಿರಾಟ್ (26) ಎಂಬಾತ ಶಿವಮೊಗ್ಗ ಜಯನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಬಾಲಕಿಯನ್ನು ಪುಸಲಾಯಿಸಿ  ಹಲವು ಆಮಿಷವೊಡ್ಡಿ 2021ರ ಡಿಸೆಂಬರ್ 27ರಂದು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ. ಈತನ ಪತ್ತೆಗಾಗಿ ಹಲವೆಡೆ ಹುಡುಕಾಟ ನಡೆಸಲಾಗುತ್ತಿದ್ದು, ಸದ್ಯಕ್ಕೆ ಯಾವುದೇ ಸುಳಿವು ಲಭ್ಯವಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ಆರೋಪಿ ಲಿಂಗರಾಜು ಕೆಲ ಸಿನಿಮಾಗಳಲ್ಲೂ ನಟಿಸಿದ್ದ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ, ಬಾಲಕಿಯ ಪರಿಚಯ ಬೆಳೆಸಿ ಪ್ರೀತಿಯ ನಾಟಕವಾಡಿ ಕರೆದೊಯ್ದಿರುವ ಶಂಕೆ ಇದೆ.ನಾಪತ್ತೆಯಾಗಿರುವ ಮಗಳನ್ನು ಹುಡುಕಿಸಿಕೊಡುವಂತೆ ಪೋಷಕರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಯತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿಯ ಬಗ್ಗೆ ಯಾರಿಗಾದರೂ ಯಾವುದೇ ಸುಳಿವು ಸಿಕ್ಕರೆ, ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್– 9480803349, 9449584739 ಅಥವಾ ನಿಯಂತ್ರಣ ಕೊಠಡಿ 9480803300 ಸಂಖ್ಯೆಗೆ ಮಾಹಿತಿ ನೀಡಬಹುದು. ಸುಳಿವು ನೀಡಿದವರ ಹೆಸರು ಗೌಪ್ಯವಾಗಿರಿಸಲಾಗುವುದು’ ಎಂದೂ ತಿಳಿಸಿದರು.

Join Whatsapp
Exit mobile version