ರಮೇಶ್ ಜಾರಕಿಹೊಳಿ ಸಿಡಿಯಲ್ಲಿದ್ದ ಯುವತಿ ಕಿಡ್ನಾಪ್ ?

Prasthutha|


ರಮೇಶ್ ಜಾರಕಿಹೊಳಿ ಸೆಕ್ಸ್ ಹಗರಣದಲ್ಲಿ ಸಿಡಿಯಲ್ಲಿದ್ದ ಯುವತಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಆಕೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನನ್ನ ಮಗಳನ್ನು ಮಾರ್ಚ್ ಎರಡರಂದು ಯಾರೋ ಅಪಹರಣ ಮಾಡಿದ್ದಾರೆ. ಕಳೆದ ಏಳು ದಿನಗಳಿಂದ ಆಕೆ ನಮ್ಮೊಂದಿಗೆ ಸಂಪರ್ಕದಲ್ಲಿಲ್ಲ. ಆಕೆಯಿಂದ ಬಲವಂತವಾಗಿ ವೀಡಿಯೋ ಮಾಡಿಸಲಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

- Advertisement -

ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವ ಯುವತಿಯ ಪೋಷಕರು, ತಮ್ಮ ಮಗಳನ್ನು ಹುಡುಕಿ ಕೊಡಿ. ನಮಗೆ ರಕ್ಷಣೆ ಕೊಡಿ ಎಂದು ಕೇಳಿಕೊಂಡಿದ್ದಾರೆ. ನಮ್ಮ ಮಗಳನ್ನು ಬೆದರಿಸಿ ಆಶ್ಲೀಲ ವೀಡಿಯೋ ಮಾಡಿಸಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

Join Whatsapp