ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್’ಶಿಪ್: ಫೈನಲ್’ನಲ್ಲಿ ಕಿದಂಬಿ ಶ್ರೀಕಾಂತ್’ಗೆ ಸೋಲು

Prasthutha|

ಸ್ಪೇನ್:  BWF ವಿಶ್ವ ಚಾಂಪಿಯನ್‌’ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದ ಕಿದಂಬಿ ಶ್ರೀಕಾಂತ್, ವಿಶ್ವ ಚಾಂಪಿಯನ್ ಆಗುವ ಕನಸು ಭಗ್ನಗೊಂಡಿದೆ. ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಸಿಂಗಾಪುರದ ಕೀನ್ ಯೆವ್ ಲೋಹ್  21-14, 21-20 ನೇರ ಸೆಟ್’ಗಳ ಅಂತರದಲ್ಲಿ ಶ್ರೀಕಾಂತ್’ರನ್ನು ಮಣಿಸುವ ಮೂಲಕ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಫೈನಲ್ ಫೈಟ್’ನಲ್ಲಿ ಸೋತರೂ, ಕಿದಂಬಿ ಶ್ರೀಕಾಂತ್ ಬೆಳ್ಳಿ ಪದಕ ಗೆದ್ದು ವಿನೂತನ ದಾಖಲೆ ನಿರ್ಮಿಸಿದ್ದಾರೆ.

- Advertisement -

12ನೇ ಶ್ರೇಯಾಂಕದ ಭಾರತದ ಸ್ಟಾರ್ ಆಟಗಾರ ಶ್ರೀಕಾಂತ್, ಪಂದ್ಯನ್ನು ಉತ್ತಮವಾಗಿಯೇ ಆರಂಭಿಸಿದ್ದರು.   ಮೊದಲ ಗೇಮ್‌’ನಲ್ಲಿ ಶ್ರೀಕಾಂತ್ 11-7ರಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಬಳಿಕ ಕಮ್’ಬ್ಯಾಕ್ ಮಾಡಿದ ಸಿಂಗಾಪುರದ ಶಟ್ಲರ್, 17-13 ಅಂತರದಲ್ಲಿ ಮುನ್ನಡೆ ಪಡೆದರು. ಬಳಿಕ ಆಕ್ರಮಣಕಾರಿ ಆಟವಾಡಿದ ಕೀನ್ ಯೆವ್ ಕೇವಲ 16 ನಿಮಿಷಗಳಲ್ಲಿ 21-15 ಅಂತರದಲ್ಲಿ ಮೊದಲ ಗೇಮ್ ಅನ್ನು ತಮ್ಮದಾಗಿಸಿಕೊಂಡರು.

- Advertisement -

ಎರಡನೇ ಗೇಮ್‌ನಲ್ಲಿ ಆರಂಭದಿಂದಲೂ ಉಭಯ ಆಟಗಾರರಿಂದಲೂ ಸಮಬಲದ ಹೋರಾಟ ಕಂಡುಬಂತು. 9-9 ರಲ್ಲಿ ಸಮಬಲ ಸಾಧಿಸಿದ ಬಳಿಕ ಲೋಹ್ ಸತತ ಎರಡು ಪಾಯಿಂಟ್‌’ಗಳಿಸಿ 11-9 ಮುನ್ನಡೆ ಸಾಧಿಸಿದರು.  ಬಳಿಕ ಹಿನ್ನಡೆಯಲ್ಲಿದ್ದ ಶ್ರೀಕಾಂತ್ ದಿಟ್ಟ ತಿರುಗೇಟು ನೀಡಿ 14-14ರಲ್ಲಿ ಸಮಬಲ ಸಾಧಿಸಿದರು. ಆದರೆ ಅಂತಿಮವಾಗಿ 21-20 ಅಂತರದಲ್ಲಿ ಸಿಂಗಾಪುರದ ಕೀನ್ ಯೆವ್ ಲೋಹ್  ಸೆಟ್’ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದರು.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌’ಶಿಪ್’ನ ಪುರುಷರ ವಿಭಾಗದಲ್ಲಿ ಈ ಹಿಂದೆ ಭಾರತದ ಪ್ರಕಾಶ್ ಪಡುಕೋಣೆ, ಬಿ. ಸಾಯಿ ಪ್ರಣೀತ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರೂ ಸಹ ಫೈನಲ್ ಪ್ರವೇಶಿಸಲು ವಿಫಲರಾಗಿದ್ದರು.

Join Whatsapp
Exit mobile version