Home ಗಲ್ಫ್ ಕತಾರ್, ಸೌದಿ ಅರೇಬಿಯಾಗೆ ಭೇಟಿ ನೀಡಲಿರುವ ಟ್ರಂಪ್ ಸಲಹೆಗಾರ

ಕತಾರ್, ಸೌದಿ ಅರೇಬಿಯಾಗೆ ಭೇಟಿ ನೀಡಲಿರುವ ಟ್ರಂಪ್ ಸಲಹೆಗಾರ

ವಾಷಿಂಗ್ಟನ್: ಗಲ್ಫ್ ನೆರೆ ರಾಷ್ಟ್ರಗಳ ನಡುವಿನ ವಿವಾದವನ್ನು ಪರಿಹರಿಸುವುದಕ್ಕಾಗಿ ವೈಟ್ ಹೌಸ್ ನ ಹಿರಿಯ ಸಲಹೆಗಾರ ಜರೇದ್ ಖುಶ್ನರ್ ಮತ್ತು ತಂಡ ಸೌದಿ ಅರೇಬಿಯಾ ಹಾಗೂ ಕತಾರ್ ಗೆ ಭೇಟಿ ನೀಡಲಿದೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.

ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ (ಎಂಬಿಎಸ್) ಮತ್ತು ಕತಾರ್ ಶೈಖ ತಮೀಮ್ ಬಿನ್ ಹಮದ್ ಅಲ್ ಥಾನಿರನ್ನುಖುಶ್ನರ್ ಮುಂಬರುವ ದಿನಗಳಲ್ಲಿ ಭೇಟಿಯಾಗಲಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿ ರಾಯ್ಟರ್ಸ್ ಗೆ ತಿಳಿಸಿದಾರೆ.

ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹ್ರೈನ್ ಮತ್ತು ಈಜಿಪ್ಟ್ ರಾಷ್ಟಗಳು ಭಯೋತ್ಪಾದನೆಯನ್ನು ಬೆಂಬಲಿಸುವ ಆರೋಪದೊಂದಿಗೆ 2017ರಲ್ಲಿ ಭೂ, ಜಲ ಮತ್ತು ವಾಯು ದಿಗ್ಬಂಧನವನ್ನು ಹೇರಿದ್ದವು ಮತ್ತು 13 ಬೇಡಿಕೆಗಳನ್ನು ಇಟ್ಟಿದ್ದವು.

ಗಲ್ಫ್ ಬಿಕ್ಕಟ್ಟನ್ನು ಪರಿಹರಿಸುವುದು ಆಡಳಿತಕ್ಕೆ ಪ್ರಧಾನ ವಿಷಯವಾಗಿದೆ ಮತ್ತು ಜನವರಿಯಲ್ಲಿ ಟ್ರಂಪ್ ಆಡಳಿತ ತೊರೆಯುವ ಮೊದಲೇ ಇದು ಸಂಭವಿಸಬಹುದು ಎಂದು ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್ ಈ ತಿಂಗಳ ಆರಂಭದಲ್ಲಿ ಹೇಳಿದ್ದರು.

Join Whatsapp
Exit mobile version