Home ಟಾಪ್ ಸುದ್ದಿಗಳು ಖಾರ್ಗೋನ್ ಗಲಭೆ: ಆರೋಪಿ ರಾಜ್ಯದಲ್ಲೇ ಇರಲಿಲ್ಲ, ಆದರೂ ಎಫ್ಐಆರ್ ನಲ್ಲಿ ಹೆಸರು

ಖಾರ್ಗೋನ್ ಗಲಭೆ: ಆರೋಪಿ ರಾಜ್ಯದಲ್ಲೇ ಇರಲಿಲ್ಲ, ಆದರೂ ಎಫ್ಐಆರ್ ನಲ್ಲಿ ಹೆಸರು

ಭೋಪಾಲ್: ಮಧ್ಯಪ್ರದೇಶದ ಖಾರ್ಗೋನ್ ನಲ್ಲಿ ರಾಮನವಮಿಯ ಸಂದರ್ಭದಲ್ಲಿ ನಡೆದ ಗಲಭೆಯ ಆರೋಪಿಗಳೆಂದು ಹೆಸರಿಸಲಾದ ಇಬ್ಬರು ವ್ಯಕ್ತಿಗಳು ಘರ್ಷಣೆ ನಡೆದ ಸ್ಥಳದಲ್ಲಿ ಸಹ ಇರಲಿಲ್ಲ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದು, ಇಬ್ಬರೂ ಈಗ ಇಂದೋರ್ ಗೆ ಮರಳಲು ಹೆದರುತ್ತಿದ್ದಾರೆ, ಅವರು ಬಂಧನದ ಭೀತಿಯಲ್ಲಿದ್ದಾರೆ ಎಂದು ಅವರ ಕುಟುಂಬ ಮತ್ತು ನೆರೆಹೊರೆಯವರು ತಿಳಿಸಿದ್ದಾರೆ.

ಏಪ್ರಿಲ್ 11 ಮತ್ತು 12 ರಂದು ಖಾರ್ಗೋನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಗಲಭೆ ಪ್ರಕರಣಗಳಲ್ಲಿ ಫರೀದ್ ಎಂಬವರನ್ನು ಆರೋಪಿಯನ್ನಾಗಿ ಹೆಸರಿಸಿದ್ದು ಏಪ್ರಿಲ್ 12ರ ಪ್ರಕರಣದಲ್ಲಿ ಆಜಮ್ ಸಹ-ಆರೋಪಿಯಾಗಿದ್ದಾರೆ. ಏಪ್ರಿಲ್ 10ರಂದು ಖರ್ಗೋನ್ ನ ಸಂಜಯ್ ನಗರದಲ್ಲಿ ನಿವಾಸಿಗಳ ಆಸ್ತಿಗಳಿಗೆ ಗಲಭೆ ಮತ್ತು ಬೆಂಕಿ ಹಚ್ಚಿದ ಆರೋಪವನ್ನು ಇಬ್ಬರೂ ಎದುರಿಸುತ್ತಿದ್ದಾರೆ.

ಆದರೆ ಫರೀದ್ ಅವರು ಏಪ್ರಿಲ್ 9 ರಿಂದ 11 ರವರೆಗೆ ಅವರು ಜಿಲ್ಲಾ ಆಸ್ಪತ್ರೆಯ ಆರ್ಥೋಪೆಡಿಕ್ ಟ್ರಾಮಾ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. “ಏಪ್ರಿಲ್ 10 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನ ಸೋದರ ಮಾವ ಫರೀದ್ ಯಾವುದೇ ಅಪರಾಧವನ್ನು ಹೇಗೆ ಮಾಡಲು ಸಾಧ್ಯ?” ಎಂದು ಕುಟುಂಬದವರು ಪ್ರಶ್ನಿಸಿದ್ದಾರೆ.

ಸಹ ಆರೋಪಿಯಾಗಿರುವ ಅಜಂ, ಬೇಕರಿ ಉತ್ಪನ್ನಗಳನ್ನು ತಲುಪಿಸಲು ಕರ್ನಾಟಕಕ್ಕೆ ತೆರಳಿದ್ದರು ಎಂದು ಅವರ ಪತ್ನಿ ಫರೀದಾ ತಿಳಿಸಿದ್ದು. “ಅವರು ಏಪ್ರಿಲ್ 8 ರಂದು ಖಾರ್ಗೋ ನ್ ನಿಂದ ಬೇಕರಿ ಉತ್ಪನ್ನಗಳೊಂದಿಗೆ ಕರ್ನಾಟಕಕ್ಕೆ ಹೊರಟಿದ್ದರು. ಅಲ್ಲಿಂದ ಅವರು ಮಹಾರಾಷ್ಟ್ರದ ಸೋಲಾಪುರ ಮತ್ತು ಧುಲೆಗೆ ಹೋದರು. ಏಪ್ರಿಲ್ 14ರಂದು ಇಂದೋರ್ ತಲುಪಿದ್ದರು. ನಂತರ ಅವರು ನಮಗೆ ಕರೆ ಮಾಡಿ ಎಫ್ ಐಆರ್ ನಲ್ಲಿ ತನ್ನ ಹೆಸರನ್ನು ತಪ್ಪಾಗಿ ಹೆಸರಿಸಲಾಗಿದೆ ಎಂದು ಹೇಳಿದರು ಎನ್ನಲಾಗಿದೆ.

ಖಾರ್ಗೋನ್ ಗಲಭೆಯಲ್ಲಿ ಹಲವು ಆರೋಪಿಗಳ ಆಸ್ತಿ ನಾಶ ಮಾಡಿದ್ದು ಸತ್ಯಾವಸ್ಥೆ ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ

Join Whatsapp
Exit mobile version