ಭೂಮಿ ಪಡೆದ ಕರಾವಳಿಯ ಬಡವರಿಗೆ ಕಾಂಗ್ರೆಸ್ ಪಕ್ಷದ ನೆನಪಿಲ್ಲ, ಇಂದು ಭಗವಾಧ್ವಜ ಹಿಡಿದಿದ್ದಾರೆ : ಮಲ್ಲಿಕಾರ್ಜುನ ಖರ್ಗೆ

Prasthutha|

- Advertisement -

ಮಂಗಳೂರು: ಕಾಂಗ್ರೆಸ್ ಪಕ್ಷದ ನೀತಿಯಿಂದ ಭೂಮಿ ಪಡೆದ ಕರಾವಳಿಯ ಬಡವರಿಗೆ ಕಾಂಗ್ರೆಸ್ ಪಕ್ಷದ ನೆನಪಿಲ್ಲ. ಇಂದು ಅವರು ಭಗವಾಧ್ವಜ ಹಿಡಿದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ‌ ಮಾತನಾಡಿದ ಅವರು, ನಿಮ್ಮನ್ನು‌ ಮಾಲೀಕರು‌ ಮಾಡಿದವರು ಯಾರು? ‌ಆ ಜನರು ತಮ್ಮ ಇತಿಹಾಸ ನೆನಪಿಟ್ಟುಕೊಳ್ಳದಿದ್ದರೆ. ಈ ದೇಶಕ್ಕೆ ಭವಿಷ್ಯ ಇಲ್ಲ. ಇಂದಿರಾ ಗಾಂಧಿ ದೇವರಾಜು ಅರಸು ಭೂಮಿ ಕೊಟ್ಟರು‌. ನಾವು ಬಂದು ಟ್ರಿಬ್ಯುನಲ್ ಮಾಡಿದ್ದೇವೆ. ಇಷ್ಟು ಲಾಭ ಮಾಡಿಕೊಟ್ಟರೂ ಜಮೀನು ಕೊಟ್ಟರು, ಆಹಾರ ಕೊಟ್ಟರೂ ಶಿಕ್ಷಣ ಕೊಟ್ಟರೂ ಇಂದು ನಮ್ಮನ್ನು ನೆನಪಿಟ್ಟುಕೊಂಡಿಲ್ಲ, ಇದು ದುರ್ದೈವ ಎಂದು ಹೇಳಿದ್ದಾರೆ.

- Advertisement -

ಕಾಂಗ್ರೆಸ್ ಪಕ್ಷದಿಂದ ಲಾಭ ಪಡೆದವರೇ ಇಂದು ನಮ್ಮನ್ನು ಮರೆತಿದ್ದಾರೆ. ಮೋದಿಗೆ ಜೈಕಾರ ಹಾಕುತ್ತಾರೆ, ಆದರೆ ಮೋದಿ ಜಮೀನು ಕೊಟ್ಟಿಲ್ಲ, ಫುಡ್ ಸೆಕ್ಯೂರಿಟಿ ಆಕ್ಟ್ ತಂದಿಲ್ಲ. ಎರಡು ಕೋಟಿ ಉದ್ಯೋಗ ಕೊಡೋದಾಗಿ ಮೋದಿ ಹೇಳಿದರೂ ಕೊಟ್ಟಿಲ್ಲ. ಆದರೂ ಮಂಗಳೂರಲ್ಲಿ‌ ಕೇಸರಿ‌ಧ್ವಜ ಹಾರಾಡುತ್ತಿದೆ ಎಂದರು.

ಅನ್ನ ಯೋಜನೆ ನಾವು, ವಿದ್ಯಾಭ್ಯಾಸ ಕೊಡೋದು ನಾವು, ಜಗಳ ಹಚ್ಚೊದು ಮೋದಿ. ಮಂಗಳೂರಲ್ಲಿ ನಮ್ಮಿಂದ ಜಮೀನು ತಗೊಂಡು ನಮ್ಮ ಅನ್ನ ತಗೊಂಡು ನಮ್ಮಿಂದ ಶಿಕ್ಷಣ ಪಡೆದವರು ನಮ್ಮನ್ನೇ ಬೈಯುತ್ತಿದ್ದಾರೆ. ಕಡುಬಡವರನ್ನು ತುಳಿಯುವ ಗುರಿ ಬಿಜೆಪಿ ಇಟ್ಟುಕೊಂಡಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ನಾವು, ದೇಶವನ್ನು ಅಭಿವೃದ್ಧಿ ಮಾಡಿದ್ದು ನಾವು ಎಂದರು.

ಕಾಂಗ್ರೆಸ್ ಸಂಸದರಾಗಿದ್ದ ಶ್ರೀನಿವಾಸ್ ಮಲ್ಯ ಅವರು ಪ್ರಧಾನಿ ನೆಹರು ಸಹಾಯ ಪಡೆದು ಉಡುಪಿ‌, ದಕ್ಷಿಣ ಕನ್ನಡದಲ್ಲಿ ನೂರಾರು ಬ್ರಿಡ್ಜ್ ಮಾಡಿದ್ದರು, ಬಂದರು ಮಾಡಿದ್ದರು, ಏರ್ ಪೋರ್ಟ್ ಮಾಡಿದರು,ಮಣಿಪಾಲ್ ಸಂಸ್ಥೆ ಇಷ್ಟು ಬೆಳೆಯಬೇಕಾದರೆ ಅದಕ್ಕೆ ನೂರಾರು ಎಕರೆ ಜಮೀನು ಕೊಟ್ಟಿದ್ದು ಕಾಂಗ್ರೆಸ್ ಸರಕಾರ. ಕಾಂಗ್ರೆಸ್ ಪಕ್ಷದಿಂದ‌ ಅಂದು ಲಾಭ ಪಡೆದವರೇ ಇಂದು ಕಾಂಗ್ರೆಸ್‌ಗೆ ವಿರುದ್ಧವಾಗಿದ್ದಾರೆ. ಕಾಂಗ್ರೆಸ್ ಲಾಭ ಮಾಡಿಕೊಟ್ಟ ಕರಾವಳಿಯಲ್ಲಿ ಬಿಜೆಪಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.

ಮೋದಿಯವರು ಈಗ ಮೋದಿ ಗ್ಯಾರಂಟಿ ಅಂತ ಹೇಳಿಕೊಂಡು ದೇಶದಲ್ಲಿ ಓಡಾಡುತ್ತಿದ್ದಾರೆ. ಬಿಜೆಪಿ ಗ್ಯಾರಂಟಿ ಅಂತ ಹೇಳಲ್ಲ, ಮೋದಿ ಗ್ಯಾರಂಟಿ ಅಂತ ಹೇಳುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಗ್ಯಾರಂಟಿ ಎಂದು ಹೇಳಲ್ಲ, ಕಾಂಗ್ರೆಸ್ ಗ್ಯಾರಂಟಿ ಎಂದು ಹೇಳುತ್ತೆ. ನಿನ್ನೆಯ ಬಜೆಟ್ ನೋಡಿದ ಮೇಲೆ‌ ನಾವು ಕರ್ನಾಟಕದಲ್ಲಿ 20 ಸೀಟ್ ಗೆಲ್ಲುತ್ತೆವೆ ಎಂಬ ಭರವಸೆ ನನಗಿದೆ. ಕಾಂಗ್ರೆಸ್ ಜಯ ಕಾರ್ಯಕರ್ತರನ್ನು ಅವಲಂಬಿಸಿದೆ. ನಾಯಕರನ್ನು ಅವಲಂಭಿಸಿಲ್ಲ. ದ.ಕ, ಉಡುಪಿ, ಚಿಕ್ಕಮಗಳೂರಲ್ಲಿ‌ ಕಾರ್ಯಕರ್ತರು ಶಕ್ತಿ ಪ್ರದರ್ಶನ ಮಾಡಿ ಕಾಂಗ್ರೆಸ್ ಪಕ್ಷವನ್ನು ಗೆಲಿಸಿಕೊಡಬೇಕು. ದೇಶದ ಎಲ್ಲಾ ಧರ್ಮದ ಜನರನ್ನು‌ ಒಗ್ಗೂಡಿಸಿ‌ ಸಂವಿಧಾನವನ್ನು ಬಲಪಡಿಸಲು ಪ್ರಜಾಪ್ರಭುತ್ವ ಉಳಿಸಲು ರಾಹುಲ್ ಗಾಂಧಿ‌ ದೇಶದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಅದನ್ನು ಸಹಿಸದೇ ಮೋದಿ ಮತ್ತು ಬಿಜೆಪಿಯವರು ರಾಹುಲ್ ಗಾಂಧಿಯವರಿಗೆ ಬೈದು ಗೇಲಿ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ಗೆ ಶಕ್ತಿ ಇದೆ ಎಂದು ಅರಿತುಕೊಂಡು ಕಾಂಗ್ರೆಸ್ ಪಕ್ಣವನ್ನು ಮುಗಿಸಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದರು. ಜನರು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ದುಡ್ಡಿಗೂ ಕೈ ಹಾಕಿದ್ದಾರೆ. ಬಿಜೆಪಿ ಬಳಿ‌ ಸಾವಿರಾರು ಕೋಟಿ ಹಣ ಇದೆ, ಕಪ್ಪು ಹಣದ ಕುಳಗಳಿಂದ 6 ಸಾವಿರ ಕೋಟಿ ರೂ. ಬಾಂಡ್ ತೆಗೆದುಕೊಂಡಿದೆ. ಕರ್ನಾಟಕ ಪಾಲಿನ ದುಡ್ಡನ್ನು ಮೋದಿ‌ ಸರ್ಕಾರ ಕೊಟ್ಟಿಲ್ಲ
ನಮಗೆ ತೊಂದರೆ ಕೊಡುತ್ತಿದ್ದಾರೆ.
ಇದರ ವಿರುದ್ಧ ನಾವು ಹೋರಾಡಬೇಕಿದೆ ಎಂದರು.

ಬಿಜೆಪಿ‌ ಪ್ರಕಾರ ಹೋದರೆ ಇಲ್ಲಿ‌ ಮನುಸ್ಮೃತಿ‌ ರೀತಿ ಇರುತ್ತಿತ್ತು. ಮೋದಿಯವರು ಮಾಧ್ಯಮ, ನ್ಯಾಯಾಂಗ, ಇಡಿ, ಸಿಬಿಐ ಸೇರಿ‌ ಎಲ್ಲವನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ದೂರಿದರು.



Join Whatsapp