ದೇಶಾದ್ಯಂತ ತೆರೆ ಕಂಡ ಬಹು ನಿರೀಕ್ಷಿತ ಕೆ.ಜಿ.ಎಫ್ 2 ಚಿತ್ರ

Prasthutha|

ಬೆಂಗಳೂರು: ದೇಶಾದ್ಯಂತ ಸೆಂಸೇಷನಲ್ ಸೃಷ್ಟಿಸಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಾಪ್ಟರ್ 2 ಚಿತ್ರ ಇಂದು ತೆರೆ ಕಂಡಿದೆ. ಗುರುವಾರ ಮಧ್ಯರಾತ್ರಿ 1ಗಂಟೆಯಿಂದಲೇ ಹಲವು ಥಿಯೇಟರ್ ಗಳಲ್ಲಿ ಚಿತ್ರವು ಪ್ರದರ್ಶನ ಕಂಡಿದೆ.

- Advertisement -

ದೇಶಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನಗೊಂಡಿರುವ ಕೆ.ಜಿ.ಎಫ್ 2 ಚಿತ್ರ, ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬಂದಿದ್ದು, ಸಿನಿಮಾ ಪಂಚ ಭಾಷೆಗಳಲ್ಲಿ ರಿಲೀಸ್ ಆಗಿದ್ದು ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಿದೆ.

ರಾಜ್ಯದ ಕೆಲವೆಡೆ ಥಿಯೇಟರ್ ಮುಂಭಾಗ ನಟ ಯಶ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಸ್ಕ್ರೀನ್ ಮುಂದೆ ಕ್ಯಾಂಡಲ್ ಬೆಳಗಿ, ಪುಷ್ಪಾರ್ಚನೆ ಮಾಡಿದ್ದಾರೆ. ಅಭಿಮಾನಿಗಳ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.

- Advertisement -

ನಟ ಯಶ್ ಅಭಿನಯದ ಕೆಜೆಎಫ್ ಭಾಗ 1 ನೇಯ ಮುಂದುವರಿದ ಭಾಗ ಇದಾಗಿದ್ದು, ಕೋವಿಡ್ ಕಾರಣದಿಂದ ಚಿತ್ರ ತೆರೆ ಕಾಣದೆ ಎರಡು ವರ್ಷಗಳ ಬಳಿಕ ಇಂದು ರಿಲೀಸ್ ಆಗಿದೆ.

Join Whatsapp
Exit mobile version