Home ಟಾಪ್ ಸುದ್ದಿಗಳು ಕೇರಳ: ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಕೇರಳ: ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ತ್ರಿಶೂರ್: ತುಂಬು ಗರ್ಭಿಣಿಯೊಬ್ಬರು ಬಸ್ ನಲ್ಲಿ ಪತಿಯೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ತ್ರಿಶೂರ್ ನಲ್ಲಿ ನಡೆದಿದೆ.


ತ್ರಿಶೂರ್ ನಿಂದ ತೊಟ್ಟಿಲ್ಪಾಲಮ್ ಗೆ ಪ್ರಯಾಣಿಸುತ್ತಿದ್ದಾಗ ನೋವು ಹೆಚ್ಚಾಗಿದ್ದು, ಕೆಎಸ್ ಆರ್ ಟಿಸಿ ಬಸ್ ನಲ್ಲಿ ಹೆರಿಗೆ ಮಾಡಿಸಲಾಗಿದೆ. ಬಸ್ ಪೆರಮಂಗಲಂ ಮೂಲಕ ಹಾದು ಹೋಗುವಾಗ ಮಹಿಳೆಗೆ ಹೆರಿಗೆ ನೋವು ಜೋರಾಗಿತ್ತು.


ಬಸ್ ತ್ರಿಶೂರ್ ಜಿಲ್ಲೆಯ ಪೆರಮಂಗಲಂ ದಾಟುತ್ತಿದ್ದಂತೆ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ತ್ವರಿತವಾಗಿ ಯೋಚಿಸಿದ ಬಸ್ ಚಾಲಕ ತಕ್ಷಣ ಮಾರ್ಗವನ್ನು ಬದಲಿಸಿ ಅಮಲಾ ಆಸ್ಪತ್ರೆಯ ಕಡೆಗೆ ಹೊರಟರು. ಕೂಡಲೇ ಹೆರಿಗೆ ಬಗ್ಗೆ ಬಸ್ ಸಿಬ್ಬಂದಿ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ.

ಅಷ್ಟೊತ್ತಿಗಾಗಲೇ ಮಹಿಳೆ ಹೆರಿಗೆಯ ಹಂತದಲ್ಲಿದ್ದಳು. ಆಸ್ಪತ್ರೆಯನ್ನು ತಲುಪಿದ ನಂತರ, ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಲಾಯಿತು, ವೈದ್ಯರು ಮತ್ತು ದಾದಿಯರು ತಕ್ಷಣವೇ ಬಸ್ ಏರಿದ್ದರು. ಅಮಲಾ ಆಸ್ಪತ್ರೆಯ ಬಸ್ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರ ಸಕಾಲಿಕ ನೆರವಿನಿಂದ ಅವರು ಬಸ್ನೊಳಗೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Join Whatsapp
Exit mobile version