Home ಟಾಪ್ ಸುದ್ದಿಗಳು ಕೇರಳ: ರಸ್ತೆ ಹೊಂಡದ ನೀರಲ್ಲಿ ಸ್ನಾನ ಮಾಡಿ ವಿಶೇಷ ಶೈಲಿಯ ಪ್ರತಿಭಟನೆ

ಕೇರಳ: ರಸ್ತೆ ಹೊಂಡದ ನೀರಲ್ಲಿ ಸ್ನಾನ ಮಾಡಿ ವಿಶೇಷ ಶೈಲಿಯ ಪ್ರತಿಭಟನೆ

ಮಲಪ್ಪುರಂ; ಜಿಲ್ಲೆಯ ಪಾಂಡಿಕ್ಕಾಡ್ ನ ಇಬ್ಬರು ಯುವಕರು ಭಾನುವಾರ ಪೂರ್ವ ಪಾಂಡಿಕ್ಕಾಡ್ ನ ಕೊಳದಂತಹ ರಸ್ತೆ ಗುಂಡಿಯ ನೀರಿನಲ್ಲಿ ಸ್ನಾನ ಮಾಡುವ ಮೂಲಕ ರಸ್ತೆಯ ಕರುಣಾಜನಕ ಪರಿಸ್ಥಿತಿಯ ವಿರುದ್ಧ ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾದ ಹಮ್ಜಾ ಪೊರಾಲಿ ಮತ್ತು ಅಜರ್ ಮೊಹಮ್ಮದ್ ಬಕೆಟ್, ಮಗ್, ಸಾಬೂನು, ಸ್ಕ್ರಬ್ ಮತ್ತು ಸ್ನಾನದ ಟವೆಲ್ನೊಂದಿಗೆ ರಸ್ತೆಗಿಳಿದು ಈ ರೀತಿಯ ವಿಶಿಷ್ಟ ಪ್ರತಿಭಟನೆ ಪ್ರಾರಂಭಿಸಿದರು.

ಸುದ್ದಿ ತಿಳಿದ ಮಂಜೇರಿ ಕ್ಷೇತ್ರದ ಶಾಸಕ ಯು.ಎ.ಲತೀಫ್ ಸ್ಥಳಕ್ಕೆ ಆಗಮಿಸಿದಾಗ ಹಮ್ಜಾ ಒಂದು ಕಾಲಿನ ಮೇಲೆ ನಿಂತು ತಲೆಯ ಮೇಲೆ ಕೈಗಳನ್ನು ಆಕಾಶಕ್ಕೆ ಎತ್ತಿ ನಮಸ್ಕಾರ ಮಾಡಿ, ಲತೀಫ್ ತನ್ನ ಕಾರಿನಿಂದ ಇಳಿದು ಬಂದು ಗುಂಡಿಯಲ್ಲಿ ನಾಲ್ಕು ಅಥವಾ ಐದು ಬಾಳೆ ಮರಗಳನ್ನು ನೆಡಬೇಕು ಎಂದು ವ್ಯಂಗ್ಯವಾಡಿದರು.

ಶಾಸಕರು ಸ್ಥಳಕ್ಕೆ ತಲುಪುವ ಹೊತ್ತಿಗೆ, ಪ್ರತಿಭಟನಾಕಾರರನ್ನು ಬೆಂಬಲಿಸಲು ಹಲವು ಯುವಕರು ಸ್ಥಳದಲ್ಲಿ ಜಮಾಯಿಸಿ ,ಶಾಸಕರೊಂದಿಗೆ ಜನರ ಈ ಸಂಕಷ್ಟವನ್ನು ಪರಿಹರಿಸಲು ಏನಾದರೂ ಮಾಡಿ ಎಂದು ಕೋರಿಕೊಂಡರು.

Join Whatsapp
Exit mobile version