Home ಟಾಪ್ ಸುದ್ದಿಗಳು ಕೇರಳ: ನೀಟ್ ಪರೀಕ್ಷೆಗೂ ಮುನ್ನ ವಿದ್ಯಾರ್ಥಿನಿಯರ ಒಳ ಉಡುಪು ಕಳಚಲು ಸೂಚನೆ

ಕೇರಳ: ನೀಟ್ ಪರೀಕ್ಷೆಗೂ ಮುನ್ನ ವಿದ್ಯಾರ್ಥಿನಿಯರ ಒಳ ಉಡುಪು ಕಳಚಲು ಸೂಚನೆ

►ಒಳ ಉಡುಪು ಧರಿಸಲು ಅಡ್ಡಿಯಾದ ಲೋಹದ ಕೊಕ್ಕೆ, ಪೊಲೀಸರಿಗೆ ದೂರು ನೀಡಿದ ವಿದ್ಯಾರ್ಥಿನಿ

ತಿರುವನಂತಪುರಂ: ನೀಟ್ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿಯೋರ್ವಳಿಗೆ ಆಕೆಯ ಒಳ ಉಡುಪು ಕಳಚಿ ಪರೀಕ್ಷೆ ಬರೆಯುವಂತೆ ಒತ್ತಾಯಪಡಿಸಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಆಯೂರ್ ಎಂಬಲ್ಲಿ ನಡೆದಿದೆ.

ಇಲ್ಲಿನ ಮಾರ್ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ನೀಟ್ ಪರೀಕ್ಷೆ ಬರೆಯಲು ತೆರಳಿದ್ದ ವಿದ್ಯಾರ್ಥಿನಿಯ ಲೋಹ ಪತ್ತೆ ತಪಾಸಣೆ ವೇಳೆ ತಪಾಸಣೆಗಾರರು ಒಳ ಉಡುಪು ಕಳಚಲು ಸೂಚಿಸಿದ್ದಾರೆ.

ಇದೇ ವೇಳೆ ಅಲ್ಲಿ ಹಲವು ವಿದ್ಯಾರ್ಥಿನಿಯರಿಗೆ ಇದೇ ಮುಜುಗರ ಎದುರಾಗಿದ್ದು, ಕೆಲವರು ಅಳುತ್ತಿದ್ದರು ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.ಇನ್ನು ಕೆಲವರು ತಮ್ಮ ಒಳ ಉಡುಪಿನಲ್ಲಿದ್ದ ಲೋಹದ ಕೊಕ್ಕೆಯನ್ನು ಕತ್ತರಿಸಿದ ಬಳಿಕ ಅದನ್ನು ಧರಿಸಲು ಅನುಮತಿಸಿದ್ದಾರೆ.

ಸಂತ್ರಸ್ಥ ವಿದ್ಯಾರ್ಥಿನಿಯು ತನ್ನ ತಂದೆಯ ಮೂಲಕ  ಈ ವಿಚಾರವಾಗಿ‌ ಕೊಲ್ಲಂ ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದ್ದು, ಪರೀಕ್ಷೆ ವೇಳೆ ಉಂಟಾದ ಅವಮಾನ ಮುಜುಗರಕ್ಕೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಘಟನೆಗೂ ಕಾಲೇಜಿಗೂ ಯಾವುದೇ ಸಂಬಂಧವಿಲ್ಲ. ತಪಾಸಣೆಯ ಉಸ್ತುವಾರಿಯನ್ನು ಖಾಸಗಿ ಎಜೆನ್ಸಿಗೆ ವಹಿಸಲಾಗಿತ್ತು ಎಂದು ಕಾಲೇಜು ಆಡಳಿತ ಮಂಡಳು ತಿಳಿಸಿದೆ.

ಈ ಕುರಿತಂತೆ ವಿದ್ಯಾರ್ಥಿನಿಯೋರ್ವಳು ದೂರು ನೀಡಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ‌. ಆ‌ ಬಳಿಕವಷ್ಟೇ ಇಂತಹ ಘಟನೆಗೆ ಯಾರು ಜವಾಬ್ದಾರರು ಎಂದು ಗೊತ್ತಾಗಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಬಿ ರವಿ ತಿಳಿಸಿದ್ದಾರೆ.

Join Whatsapp
Exit mobile version