Home ಟಾಪ್ ಸುದ್ದಿಗಳು ಕೇರಳ: ಆಲಪುಝದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಭೀಕರ ಹತ್ಯೆ

ಕೇರಳ: ಆಲಪುಝದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಭೀಕರ ಹತ್ಯೆ

ಆಲಪುಝ: ಆಲಪುಝ ಸಮೀಪದ ಹರಿಪಾಡ್ ಎಂಬಲ್ಲಿ ಆರೆಸ್ಸೆಸ್ ಕಾರ್ಯಕರ್ಯನನ್ನು ಮಾರಕಾಯುಧದಿಂದ ಇರಿದು ಕೊಲೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಮೀಪದ ದೇವಸ್ಥಾನವೊಂದಕ್ಕೆ ‘ತಾಳಂ’ ನೃತ್ಯ ಮಾಡಲು ಹೋಗಿದ್ದ ಸಂದರ್ಭದಲ್ಲಿ ನಡೆದ ಮಾತಿನ ವಾಗ್ವಾದ ಆರೆಸ್ಸೆಸ್ ಕಾರ್ಯಕರ್ತನ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ.

ತನ್ನ ಕೆಲವು ಸ್ನೇಹಿತರೊಂದಿಗೆ ದೇವಸ್ಥಾನದಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ರಾತ್ರಿ ಸಮಯ ಸುಮಾರು 11.30 ಕ್ಕೆ ಶರತ್ ಚಂದ್ರನ್ ಎಂಬಾತನನ್ನು ಇರಿದು ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರಕಾಯುಧದಿಂದ ದಾಳಿಗೊಳಗಾಗಿ ರಕ್ತದ ಮಡುವಿನಲ್ಲಿದ್ದ ಶರತ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಶರತ್ ಚಂದ್ರನ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ವರದಿ ಮತ್ತು ವಿಚಾರಣೆಯ ವರದಿ ಇನ್ನಷ್ಟೆ ಬರಬೇಕಿದೆ.

ಹತ್ಯೆಯ ಕುರಿತು ತ್ರಿಶೂರ್ ನಲ್ಲಿ ಪ್ರಯಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಹತ್ಯೆಯಾದ ಯುವಕ ಆರೆಸ್ಸೆಸ್ ಕಾರ್ಯಕರ್ತ ಮತ್ತು ಡ್ರಗ್ಸ್ ಮಾಫಿಯಾ ಈತನನ್ನು ನಿರ್ಧಯವಾಗಿ ಹತ್ಯೆ ಮಾಡಿದೆ ಎಂದು ಆರೋಪಿಸಿದ್ದಾರೆ.

ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಯಲ್ಲಿ ಡ್ರಗ್ಸ್ ಮಾಫೀಯಾ, ಸುಪಾರಿ ಗ್ಯಾಂಗ್ ಮತ್ತು ಸಮಾಜದ್ರೋಹಿ ಶಕ್ತಿಗಳು ಭಾಗಿಯಾಗಿದೆ. ಇಂತಹ ಶಕ್ತಿಗಳಿಗೆ ಆಡಳಿತ ನಡೆಸುವ ಕಮ್ಯೂನಿಷ್ಟ್ ಸರ್ಕಾರ ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದರು.

ಈ ಹಿಂದಿನ ಹಲವು ಪ್ರಕರಣದಲ್ಲಿ ಸಿಪಿಐ (ಎಂ) ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಸುರೇಂದ್ರನ್ ಆರೋಪಿಸಿದ್ದರು.

Join Whatsapp
Exit mobile version