ಕೇರಳ: ದೋಣಿ ಸ್ಪರ್ಧೆಯಲ್ಲಿ ರಾಹುಲ್ ಗಾಂಧಿ

Prasthutha|

ಆಲಪ್ಪುಝ: ಕೇರಳದ ಪ್ರಸಿದ್ಧ ದೋಣಿ ಸ್ಪರ್ಧೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.


ಭಾರತ್ ಜೋಡೊ ಯಾತ್ರೆಯ 12ನೇ ದಿನವಾದ ಸೋಮವಾರ ಆಲಪ್ಪುಝದಿಂದ ಪಾದಯಾತ್ರೆ ಮುಂದುವರಿಸಲಾಯಿತು. ಮಧ್ಯಾಹ್ನದ ಬಳಿಕ ಪುನ್ನಮಡ ಹಿನ್ನೀರಿನಲ್ಲಿ ವಿಶೇಷ ದೋಣಿ ಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಯಿತು. ರಾಹುಲ್ ಗಾಂಧಿ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

- Advertisement -