ಕೊಚ್ಚಿನ್: ಪರವಾನಿಗೆ ಇಲ್ಲದೆ ಬಂದೂಕು ಹೊಂದಿದ್ದ ಆರೋಪದಲ್ಲಿ 18 ಖಾಸಗಿ ಭದ್ರತಾ ಸಿಬ್ಬಂದಿಯನ್ನು ಕೇರಳ ಪೊಲೀಸರು ಕೊಚ್ಚಿಯ ಕಲಮಸ್ಸೆರಿ ಪ್ರದೇಶದಿಂದ ಬಂಧಿಸಿದ್ದಾರೆ.
ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಅವರ ವಾಸ ಸ್ಥಳದಿಂದ 19 ಬಂದೂಕು ಮತ್ತು ಸರಿಸುಮಾರು 100 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಜಮ್ಮು ಕಾಶ್ಮೀರದ ರಾಜೌರಿ ನಿವಾಸಿಗಳೆಂದು ಕೊಚ್ಚಿನ್ ಪೊಲೀಸರು ತಿಳಿಸಿದ್ದಾರೆ.