Home ಟಾಪ್ ಸುದ್ದಿಗಳು ಕೇರಳ: ಮುಸ್ಲಿಂ ಜಮಾಅತ್ ಕಣ್ಣೂರು ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಪಝಶ್ಶಿ ನಿಧನ

ಕೇರಳ: ಮುಸ್ಲಿಂ ಜಮಾಅತ್ ಕಣ್ಣೂರು ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಪಝಶ್ಶಿ ನಿಧನ

ಕಣ್ಣೂರು: ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಮತ್ತು ಸುನ್ನಿ ಮುಖಂಡ ಎನ್. ಅಬ್ದುಲ್ಲತೀಫ್ ಸಅದಿ ಪಝಶ್ಶಿ ನಿಧನರಾಗಿದ್ದಾರೆ.


ಕಣ್ಣೂರಿನಲ್ಲಿ ಕೆ.ಎಂ.ಬಶೀರ್ ಪರ ನ್ಯಾಯಕ್ಕಾಗಿ ಕೇರಳ ಮುಸ್ಲಿಂ ಜಮಾಅತ್ ಆಯೋಜಿಸಿದ್ದ ಕಲೆಕ್ಟರೇಟ್ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತಾಡಿ ಹಿಂದಿರುಗಿದ ಅವರಿಗೆ ಎದೆ ನೋವು ಅನುಭವವಾಗಿತ್ತು.


ತಕ್ಷಣ ಅವರನ್ನು ಕಣ್ಣೂರಿನ ಎಕೆಜಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಧ್ಯಾಹ್ನ 3.30 ರ ವೇಳೆಗೆ ಅವರು ಇಹಲೋಕ ತ್ಯಜಿಸಿದರು ಎಂದು ತಿಳಿದು ಬಂದಿದೆ.

Join Whatsapp
Exit mobile version